ಐಪಿಎಸ್ ಅಧಿಕಾರಿ ಮನೆಗೆ ಅಗ್ನಿ ಶಾಮಕ ವಾಹನದ ಮೂಲಕ ನೀರು ಸರಬರಾಜು..! ಶಾಕಿಂಗ್ ವಿಡಿಯೋ ವೈರಲ್

ಐಪಿಎಸ್ ಅಧಿಕಾರಿಯೊಬ್ಬರ ಮನೆಗೆ ಅಗ್ನಿಶಾಮಕ ದಳದ ವಾಹನವೊಂದು ನೀರು ಸರಬರಾಜು ಮಾಡ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಇದು ವಿವಾದ ಹುಟ್ಟು ಹಾಕಿದೆ. ವೀಡಿಯೋದಲ್ಲಿ ಐಪಿಎಸ್ ಅಧಿಕಾರಿ ಅರ್ಚನಾ ತ್ಯಾಗಿ ಅವರ ನಾಮಫಲಕ ಮನೆಯ ಮುಂದೆ ಕಾಣಿಸುತ್ತಿದೆ.

ಉತ್ತರಾಖಂಡ್‌ನ ಡೆಹ್ರಾಡೂನ್‌ನ ಪೂರ್ವ ಕೆನಾಲ್ ರಸ್ತೆಯಲ್ಲಿರುವ ಅರ್ಚನಾ ತ್ಯಾಗಿ ಮನೆ ವಿಡಿಯೋ ಇದಾಗಿದೆ. ಡೆಹ್ರಾಡೂನ್ ಮೂಲದ ಐಪಿಎಸ್ ಅಧಿಕಾರಿ ಅರ್ಚನಾ ತ್ಯಾಗಿ 1993ರ ಬ್ಯಾಚ್‌ನ ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಅಧಿಕಾರಿ. ಅವರನ್ನು ಸೂಪರ್‌ಕಾಪ್ ಎಂದು ಕರೆಯುತ್ತಾರೆ. 2014 ರ ಚಲನಚಿತ್ರ ಮರ್ದಾನಿಗೆ ಅವರು ಸ್ಫೂರ್ತಿಯಾಗಿದ್ದಾರೆ.

ವೈರಲ್ ಆಗಿರುವ ವಿಡಿಯೋಗೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತ್ ಸಿನ್ಹಾ, ಅಗ್ನಿಶಾಮಕ ದಳದ ವಾಹನವು ಅಧಿಕಾರಿಯ ನಿವಾಸಕ್ಕೆ ಹೇಗೆ ನೀರು ಸರಬರಾಜು ಮಾಡಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಮುಖ್ಯ ಅಗ್ನಿಶಾಮಕ ಅಧಿಕಾರಿ ವಂಶ್ ಬಹದ್ದೂರ್ ಯಾದವ್, ಜೂನ್ 15 ರಂದು ಮನೆಯಲ್ಲಿ ಎಲ್ಪಿಜಿ ಸೋರಿಕೆ ವರದಿಯಾದಾಗ ಈ ಘಟನೆ ಸಂಭವಿಸಿದೆ. ಘಟನೆ ವೇಳೆ ಅರ್ಚನಾ ತ್ಯಾಗಿ ಪೋಷಕರು ಮನೆಯಲ್ಲಿದ್ದರು ಎಂದಿದ್ದಾರೆ.

https://twitter.com/be_political123/status/1818123407159874026?ref_src=twsrc%5Etfw%7Ctwcamp%5Etweetembed%7Ctwterm%5E1818123407159874026%7Ctwgr%5Ec99740c19dbf283b446b0d2e5ab56350a04eb770%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fabplive-epaper-dh7e8ed9a840a34a2e9316137468a5ca4c%2Fvideooffirebrigadefillingwatertankatipsofficershousegoesviralsparksrow-newsid-n624432437

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read