ಕ್ವೀನ್ ಚಿತ್ರದ ‘ಲಂಡನ್ ತುಮಕ್ಡಾ’ ಹಾಡು ವಿವಿಧ ಆಚರಣೆಗಳು ಮತ್ತು ಪಾರ್ಟಿಗಳ ಸಮಯದಲ್ಲಿ ಪ್ಲೇ ಮಾಡಲೇಬೇಕಾದ ಹಾಡಾಗಿ ಮಾರ್ಪಟ್ಟಿದೆ.
ಬಿಡುಗಡೆಯಾದ ಸುಮಾರು 9 ವರ್ಷಗಳ ನಂತರವೂ, ಹಾಡು ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ ಮತ್ತು ಇನ್ನೂ ಹಲವಾರು ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ಈ ಹಾಡು ಕಾಣಿಸುತ್ತವೆ.
ಇದೀಗ ನೇಪಾಳದ ಯುವತಿಯರ ತಂಡವೊಂದು ಪೆಪ್ಪಿ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ವಿಡಿಯೋವನ್ನು ದಿ ವಿಂಗ್ಸ್ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ನೇಪಾಳದ ಕಠ್ಮಂಡುವಿನ ನೃತ್ಯ ಗುಂಪು ಇದಕ್ಕೆ ನರ್ತಿಸಿವೆ.
ನಾಲ್ವರು ಮಹಿಳೆಯರು ಸಡಿಲವಾದ ಪ್ಯಾಂಟ್‌ಗಳು, ಸ್ವೆಟ್‌ಶರ್ಟ್‌ಗಳು ಮತ್ತು ಒಂದು ಜೋಡಿ ಸ್ನೀಕರ್‌ಗಳನ್ನು ತೊಟ್ಟು ಹಾಡಿಗೆ ಚೈತನ್ಯದಿಂದ ಕುಣಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮಹಿಳೆಯರ ಶಕ್ತಿ ಮತ್ತು ಉತ್ಸಾಹವು ವೀಕ್ಷಿಸಲು ಯೋಗ್ಯವಾಗಿದೆ ಎಂದು ಹಲವರು ಕಮೆಂಟ್ನಲ್ಲಿ ತಿಳಿಸುತ್ತಿದ್ದಾರೆ.
ವಿಡಿಯೋ ಇದಾಗಲೇ 1 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಸುಮಾರು 8000 ಕಾಮೆಂಟ್‌ಗಳನ್ನು ಗಳಿಸಿದೆ.
https://youtu.be/RLNFR7Yu0fA