Viral Video: ತನಗಾಕಿದ್ದ ನೋಟಿನ ಮಾಲೆ ಕದ್ದ ಕಳ್ಳ; ಹಿಡಿಯಲು ಕುದುರೆ ಬಿಟ್ಟು ಓಡಿದ ವರ…!

ಉತ್ತರ ಪ್ರದೇಶದ ಮೀರತ್‌ನಿಂದ ವರದಿಯಾದ ನಾಟಕೀಯ ಘಟನೆಯೊಂದರಲ್ಲಿ ವರನೊಬ್ಬನಿಗೆ ಹಾಕಿದ್ದ ಹಾರದಲ್ಲಿದ್ದ ಕರೆನ್ಸಿ ನೋಟುಗಳನ್ನು ಕಳ್ಳನೊಬ್ಬ ದೋಚಿದ್ದು. ಈ ವೇಳೆ ತನ್ನ ಮದುವೆಯ ಸ್ಥಳಕ್ಕೆ ಕುದುರೆ ಸವಾರಿಯಲ್ಲಿ ಹೋಗುತ್ತಿದ್ದ ವರ ಅದರಿಂದ ಹಾರಿ ಕಳ್ಳನನ್ನು ಬೆನ್ನಟ್ಟಿ ಆತನನ್ನು ಕೊನೆಗೂ ಹಿಡಿದು ಥಳಿಸಿದ್ದಾನೆ.

ಕಳ್ಳನನ್ನು ಬೆನ್ನಟ್ಟಲು ವರ ಕುದುರೆಯಿಂದ ಹಾರಿದ್ದು, ಟ್ರಕ್‌ ನಲ್ಲಿ ಹೋಗುತ್ತಿದ್ದ ಕಳ್ಳನನ್ನು ಬೆನ್ನಟ್ಟಿದ್ದಾನೆ. ಮೀರತ್‌ನಿಂದ ಬಂದ ದೃಶ್ಯಗಳಲ್ಲಿ ವರ ಮಿನಿ ಟ್ರಕ್‌ಗೆ ನುಗ್ಗಿ ಕಳ್ಳನನ್ನು ಹಿಡಿದಿದ್ದಾನೆ.

ವರ ಟ್ರಕ್ ಹಿಂಬಾಲಿಸಿ ಕಳ್ಳನನ್ನು‌ ಹಿಡಿದು ಥಳಿಸುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಮಾಲೆ ಧರಿಸಿದ ವರನು ಮಿನಿ ಟ್ರಕ್‌ನ ಮೇಲೆ ಜಿಗಿಯುವುದು, ಬಳಿಕ ಡೋರ್‌ ನಿಂದ ಸಿನಿಮೀಯ ಶೈಲಿಯಲ್ಲಿ ಟ್ರಕ್‌ ಒಳಗೆ ಹೋಗುವುದನ್ನು ದೃಶ್ಯಾವಳಿಗಳು ಸೆರೆಹಿಡಿದಿವೆ.

ವರನು ಟ್ರಕ್ ಕಿಟಕಿಯ ಮೂಲಕ ಚಾಲಕನ ಕ್ಯಾಬಿನ್  ಪ್ರವೇಶಿಸಿ ಅವನನ್ನು ಹಿಡಿಯುತ್ತಾನೆ. ಚಾಲಕನ ಸ್ಥಾನದಲ್ಲಿದ್ದ ಕಳ್ಳ ಆ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದಾಗ, ಬೈಕ್ ಸವಾರನೊಬ್ಬ ತನ್ನ ದ್ವಿಚಕ್ರ ವಾಹನವನ್ನು ಮಿನಿ ಟ್ರಕ್‌ನ ಮುಂದೆ ನಿಲ್ಲಿಸಿ ಮಾರ್ಗವನ್ನು ನಿರ್ಬಂಧಿಸುತ್ತಾನೆ. ಆಗ ವರ ಕೋಪದಿಂದ ಕಳ್ಳನಿಗೆ ಪದೇ ಪದೇ ಗುದ್ದುತ್ತಾನೆ. ಇನ್ನೂ ಕೆಲವರು ವರನ ಬೆಂಬಲಕ್ಕೆ ಬಂದು ಹಣವನ್ನು ಕದ್ದಿದ್ದಕ್ಕಾಗಿ ಕಳ್ಳನನ್ನು ಥಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read