ಹ್ಯಾಂಡ್ ಬ್ರೇಕ್ ಹಾಕದೇ ಇಳಿದ ಲೊಕೊ ಪೈಲಟ್: ಚಾಲಕನಿಲ್ಲದೇ 100 ಕಿ.ಮೀ. ವೇಗದಲ್ಲಿ ಓಡಿದ ಗೂಡ್ಸ್ ರೈಲು | Viral VIDEO

ಲೋಕೋ ಪೈಲಟ್ ಇಲ್ಲದೆ ಕಥುವಾದಿಂದ ಪಠಾಣ್‌ಕೋಟ್ ಕಡೆಗೆ ಗೂಡ್ಸ್ ರೈಲು ಓಡಿದ್ದು, ಪಂಜಾಬ್‌ನ ಮುಕೇರಿಯನ್ ಬಳಿ ನಿಲ್ಲಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಕಥುವಾ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಗೂಡ್ಸ್ ರೈಲು ಪಠಾಣ್‌ಕೋಟ್ ಕಡೆಗೆ ಇಳಿಜಾರಿನ ಕಾರಣ ಲೊಕೊ ಪೈಲಟ್ ಇಲ್ಲದೆ ಓಡಲು ಪ್ರಾರಂಭಿಸಿತು. ರೈಲು ಹೆಚ್ಚಿನ ವೇಗದಲ್ಲಿ 100 ಕಿಮೀ/ಗಂ ವೇಗವನ್ನು ತಲುಪಿದೆ ಎಂದು ವರದಿಯಾಗಿದೆ.

ರೈಲ್ವೆ ಅಧಿಕಾರಿಗಳು ಸಾಕಷ್ಟು ಪ್ರಯತ್ನಗಳ ನಂತರ ಪಂಜಾಬ್‌ನ ಮುಕೇರಿಯನ್‌ನ ಉಚ್ಚಿ ಬಸ್ಸಿ ಬಳಿ ಮಾನವರಹಿತ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ವಿಚಾರಣೆ ಆರಂಭಿಸಲಾಗಿದೆ ಎಂದು ಜಮ್ಮುವಿನ ವಿಭಾಗೀಯ ಸಂಚಾರ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

ರೈಲು ನಿಲ್ದಾಣದ ಮೂಲಕ ಅತಿ ವೇಗದಲ್ಲಿ ಹಾದುಹೋಗುತ್ತಿರುವ ದೃಶ್ಯಗಳನ್ನು ತೋರಿಸುವ ರೈಲಿನ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಕಥುವಾ ನಿಲ್ದಾಣದಲ್ಲಿ ನಿಲುಗಡೆಯಲ್ಲಿದ್ದ ಸರಕು ರೈಲನ್ನು ಲೊಕೊ ಪೈಲಟ್ ಇಲ್ಲದೆ ಅಲ್ಲಿಂದ ಹೊರಟು ಮುಕೇರಿಯನ್‌ನ ಉಚ್ಚಿ ಬಸ್ಸಿ ಬಳಿ ಯಶಸ್ವಿಯಾಗಿ ನಿಲ್ಲಿಸಲಾಯಿತು ಎಂದು ಹೇಳಲಾಗಿದೆ.

ಘಟನೆಯ ವಿವರ

ಸ್ಥಳೀಯರ ಪ್ರಕಾರ, ಭಾನುವಾರ ಬೆಳಿಗ್ಗೆ 7:10 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಲೋಕೋ ಪೈಲಟ್ ಜಮ್ಮುವಿನ ಕಥುವಾದಲ್ಲಿ ಗೂಡ್ಸ್ ರೈಲು ಸಂಖ್ಯೆ 14806 ಆರ್ ಅನ್ನು ನಿಲ್ಲಿಸಿದ್ದರು. ಬಳಿಕ ಚಾಲಕ ಹ್ಯಾಂಡ್‌ಬ್ರೇಕ್‌ ಹಾಕದೆ ರೈಲಿನಿಂದ ಇಳಿದು ಟೀ ಕುಡಿಯಲು ತೆರಳಿದ್ದ. ಏತನ್ಮಧ್ಯೆ, ರೈಲು ಇದ್ದಕ್ಕಿದ್ದಂತೆ ಚಲಿಸಲು ಪ್ರಾರಂಭಿಸಿತು ಮತ್ತು ಅಂತಿಮವಾಗಿ ವೇಗವನ್ನು ಪಡೆದ ನಂತರ ಓಡಲು ಪ್ರಾರಂಭಿಸಿತು ಎನ್ನಲಾಗಿದೆ.

ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾದ ರೈಲ್ವೆ ಅಧಿಕಾರಿಗಳ ಕ್ಷಿಪ್ರ ನಿರ್ವಹಣೆಯಿಂದಾಗಿ ಭಾರೀ ಅನಾಹುತ ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

https://twitter.com/i/status/1761609842668769478

https://twitter.com/ANI/status/1761615981196030258

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read