VIDEO: ಬಸ್‌ ನಲ್ಲೇ ಚಾಲಕ – ನಿರ್ವಾಹಕನ ಗುಂಡು ಪಾರ್ಟಿ…! ಪ್ರಯಾಣಿಕರ ಸುರಕ್ಷತೆ ಕುರಿತು ʼಆತಂಕʼ

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋ ಒಂದು, ಮಹಿಳೆಯರು ಎಲ್ಲಿ ಸುರಕ್ಷಿತ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಬಸ್‌ ನಲ್ಲಿಯೇ ಡ್ರೈವರ್‌ ಹಾಗೂ ಕ್ಲೀನರ್‌ ಮದ್ಯದ ಪಾರ್ಟಿ ಮಾಡ್ತಿರುವ ವಿಡಿಯೋ ಒಂದು ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಬಸ್‌ ನಿಲ್ಲಿಸಿರುವ ಡ್ರೈವರ್‌ ಹಾಗೂ ಕ್ಲೀನರ್‌ ಸೇರಿದಂತೆ ಮೂರ್ನಾಲ್ಕು ಮಂದಿ ಪಾರ್ಟಿ ಮಾಡ್ತಿರೋದನ್ನು ಕಾಣಬಹುದು. ಬೋಜ್ಪುರಿ ಹಾಡೊಂದು ಅಲ್ಲಿ ಕೇಳಿ ಬರ್ತಿದೆ.

@azizkavish ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈವರೆಗೆ 12,000 ಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. ಹಾರ್ಡೋಯ್ ಡಿಪೋದಲ್ಲಿ ಬಸ್‌ ಚಾಲಕ ಮತ್ತು ಕ್ಲೀನರ್‌ ಮದ್ಯದ ಪಾರ್ಟಿ ಮಾಡ್ತಿದ್ದಾರೆ. ಇವರಿಂದಲೇ ಬಸ್‌ ನಲ್ಲಿ ಅತ್ಯಾಚಾರ, ರಸ್ತೆ ಅಪಘಾತ ನಡೆಯುತ್ತದೆ. ಇದನ್ನು ತಡೆಯೋರು ಯಾರು ಎಂದು ಶೀರ್ಷಿಕೆ ಹಾಕಲಾಗಿದೆ.

ಈ ವಿಡಿಯೋ ವೈರಲ್‌ ಆಗ್ತಿದ್ದಂತೆ ಬಳಕೆದಾರರು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಧಿಕಾರಿಗಳು ಇಂಥ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು, ಪಾರ್ಟಿ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಡ ಹೇರಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read