ತಂದೆಯ ಆಸೆ ಈಡೇರಿಸಲು ಆಸ್ಪತ್ರೆಯಲ್ಲೇ ಮದುವೆಯಾದ ಪುತ್ರಿಯರು | Viral Video

ಲಕ್ನೋ: ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ತಂದೆ ಐಸಿಯು ವಾರ್ಡ್‌ಗೆ ದಾಖಲಾದ ನಂತರ ಇಬ್ಬರು ಪುತ್ರಿಯರು ಐಸಿಯು ವಾರ್ಡ್ ಅನ್ನೇ ತಮ್ಮ ಮದುವೆಯ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ.

ಅವರು ಮದುವೆಯಾಗುವುದನ್ನು ನೋಡುವ ತಮ್ಮ ತಂದೆಯ ಆಸೆಯನ್ನು ಈಡೇರಿಸಲು ಹುಡುಗಿಯರು ಆಸ್ಪತ್ರೆಯ ಆವರಣದಲ್ಲಿ ಮದುವೆಯಾಗಿದ್ದಾರೆ. ಹಾಸಿಗೆಯಲ್ಲಿ ಮಲಗಿರುವ ತಂದೆ, ವೈದ್ಯರು ಮತ್ತು ದಾದಿಯರ ಸಮ್ಮುಖದಲ್ಲಿ ತಮ್ಮ ನಿಕಾಹ್ ಮಾಡಿಕೊಂಡಿದ್ದಾರೆ. ಈ ವಿವಾಹದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಜುನೈದ್ ಮಿಯಾನ್ ಎಂದು ಗುರುತಿಸಲಾದ ತಂದೆಯ ಮುಂದೆ ಪ್ರತಿಜ್ಞೆ ವಿನಿಮಯ ಮಾಡಿಕೊಂಡ ಇಬ್ಬರು ಜೋಡಿಗಳ ವಿವಾಹದ ಒಂದು ನೋಟವನ್ನು ವೀಡಿಯೊದಲ್ಲಿ ಕಾಣಬಹುದು.

ಜುನೈದ್‌ನ ಹಾಸಿಗೆಯ ಪಕ್ಕದಲ್ಲಿ ಸುಮಾರು ಐದು ನಿಮಿಷಗಳ ಕಾಲ ಮದುವೆ ನಡೆಯಿತು. ಕುಟುಂಬದವರ ಮನವಿಯನ್ನು ಪರಿಗಣಿಸಿದ ಆರೋಗ್ಯಾಧಿಕಾರಿಗಳು ಮದುವೆಗೆ ಅವಕಾಶ ಮಾಡಿಕೊಟ್ಟರು. ಐಸಿಯುನಲ್ಲಿ ಇತರ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಧಾರ್ಮಿಕ ಕ್ರಿಯೆ ನಡೆಸಲಾಗಿದೆ.

ಅಲಂಕಾರಿಕ ಉಡುಪು ಮತ್ತು ಅದ್ದೂರಿ ಡ್ರೆಸ್ಸಿಂಗ್ ಬದಲಿಗೆ ಮದುವೆಯಲ್ಲಿ ವೈದ್ಯಕೀಯ ಗೌನ್‌ಗಳನ್ನು ಧರಿಸಿದ್ದರು. ಪ್ರೋಟೋಕಾಲ್‌ನ ಕಟ್ಟುನಿಟ್ಟಾದ ಸೂಚನೆಯೊಂದಿಗೆ ನಿಕಾಹ್ ನಿರ್ವಹಿಸಲು ವಾರ್ಡ್‌ನೊಳಗೆ ಕೇವಲ ನಾಲ್ಕು ಜನರಿಗೆ ಮಾತ್ರ ಅವಕಾಶ ನೀಡಲಾಯಿತು. ದಂಪತಿಗಳು, ಧರ್ಮಗುರುಗಳ ಸಮ್ಮುಖದಲ್ಲಿ, ಅನಾರೋಗ್ಯದ ವ್ಯಕ್ತಿಯ ಹಾಸಿಗೆಯ ಪಕ್ಕದಲ್ಲಿ ವಿವಾಹವಾದರು.

ಜುನೈದ್ ಮತ್ತು ಅವರ ಪುತ್ರಿಯರು ಯುಪಿಯ ಲಕ್ನೋದ ಮೋಹನ್‌ಲಾಲ್‌ಗಂಜ್ ಎಂಬ ಹಳ್ಳಿಯಿಂದ ಬಂದವರು. ವರರು ಮುಂಬೈನಲ್ಲಿ ನೆಲೆಸಿದ್ದು, ಮದುವೆಗೆಂದು ಲಕ್ನೋ ಆಸ್ಪತ್ರೆಗೆ ಆಗಮಿಸಿದ್ದರು.

https://twitter.com/TrueStoryUP/status/1802045475190890897

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read