Viral Video | ಹಿಂದಿ ಗೀತೆಗೆ ಅಜ್ಜಿ ಮಾಡಿದ ನೃತ್ಯ ಕಂಡು ಫಿದಾ ಆದ ನೆಟ್ಟಿಗರು……!

ಬಾಲಿವುಡ್​ ತಾರೆಯರಾದ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅಭಿನಯದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ಇತ್ತೀಚಿಗೆ ಬಿಡುಗಡೆಯಾದ ಹಾಡನ್ನು ನೀವು ಕೇಳಿ ಆನಂದಿಸಿರ್ತೀರಾ. ಆದ್ರೆ ಇದೆಲ್ಲದರ ನಡುವೆ ಓಲ್ಡ್ ಇಸ್ ಗೋಲ್ಡ್ ಆಗಿರುವ ಆಶಾ ಭೋಸ್ಲೆ ಹಾಡಿರುವ ‘ಜುಮ್ಕಾ ಗಿರಾ ರೇ ಬರೇಲಿ ಕೆ ಬಜಾರ್ ಮೇ’ ಹಾಡಿನ ನೃತ್ಯವನ್ನು ಮತ್ತೆ ಮರು ಸೃಷ್ಟಿಸಿ ರೀಲ್ಸ್ ಮಾಡಲಾಗಿದೆ. ಈ ರೀಲ್ಸ್ ಇದೀಗ ಇಂಟರ್ನೆಟ್‌ನಲ್ಲಿ ಸೆನ್ಸೇಶನ್‌ನ್ನು ಸೃಷ್ಟಿಸಿದೆ.

ವೀಡಿಯೊದಲ್ಲಿ ಡ್ಯಾನ್ಸಿಂಗ್ ಡ್ಯಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದು ಚಿರಪರಿಚಿತರಾಗಿರುವ ರವಿ ಬಾಲ ಶರ್ಮಾ ಅವರು ಈ ಬಾಲಿವುಡ್ ಹಾಡಿಗೆ ಪವರ್‌ಫುಲ್ ಸ್ಟೆಪ್ಸ್ ಹಾಕಿದ್ದಾರೆ. ತನ್ನ ಮಸ್ತ್ ಆದ ಡ್ರೆಸ್‌ನಲ್ಲಿ ಮಿಂಚುತ್ತಾ ಆಕರ್ಷಕವಾಗಿ ನೃತ್ಯ ಮಾಡುವ ಮೂಲಕ ಈ ರೀಲ್ಸ್ ಆರಂಭವಾಗುತ್ತೆ. ಬಳಿಕ ಅವರು ತುಂಬಾನೆ ಇಷ್ಟ ಪಟ್ಟಿರುವ ಹಾಡಿಗೆ ತನ್ನ ಅಭಿನಯದಿಂದಲೇ ಹೆಜ್ಜೆ ಹಾಕುವ ಮೂಲಕ ವೀಕ್ಷಕರನ್ನು ಆಕರ್ಷಿಸಿದ್ದಾರೆ.

ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿರುವ ಈ ರೀಲ್ಸ್‌ನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬ ಪ್ರೋತ್ಸಾಹದಾಯಕ ಕಾಮೆಂಟ್‌ಗಳ ಜೊತೆಗೆ ಸಾವಿರಾರು ಲೈಕ್‌ಗಳು ಪ್ರಶಂಸೆಯಾಗಿ ಸುರಿದಿದೆ.

https://www.instagram.com/reel/Cug7Kt7NRHO/?utm_source=ig_web_copy_link

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read