Viral Video: ಟಿಕೆಟ್‌ ಇಲ್ಲದೆ ರೈಲಿನಲ್ಲಿ ಪ್ರಯಾಣ; ಕೇಳಿದ ಟಿಟಿಗೆ ಪೊಲೀಸ್‌ ‌ʼಆವಾಜ್ʼ

ದೀಪಾವಳಿ ಹಬ್ಬದ ಸಮಯದಲ್ಲಿ, ಭಾರತದಾದ್ಯಂತ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು. ಈ ನೂಕುನುಗ್ಗಲಿನ ಮಧ್ಯೆ ರೈಲಿನ ವೈರಲ್ ವಿಡಿಯೋ ಒಂದು ಸಾರ್ವಜನಿಕರ ಗಮನ ಸೆಳೆದಿದೆ.

ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಿರುವ ಪೊಲೀಸನೊಬ್ಬ ಟಿಕೆಟ್‌ ಪರೀಕ್ಷಕನೊಂದಿಗೆ (ಟಿಟಿಇ) ತೀವ್ರ ವಾಗ್ವಾದದಲ್ಲಿ ತೊಡಗಿರುವುದು ವೀಡಿಯೊದಲ್ಲಿ ಕಂಡು ಬರುತ್ತದೆ. ಟಿಟಿ ನಿಯಮ ವಿವರಿಸುತ್ತಿದ್ದರೂ ಪೊಲೀಸ್‌ ಪೇದೆ ವಾದದಲ್ಲಿ ತೊಡಗಿದ್ದು, ಇದನ್ನು ಸಹ ಪ್ರಯಾಣಿಕರು ತಮ್ಮ ಮೊಬೈಲ್‌ ನಲ್ಲಿ ರೆಕಾರ್ಡ್‌ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ.

ನವೆಂಬರ್ 5 ರಂದು “ಘರ್ ಕೆ ಕಾಲೇಶ್” ಖಾತೆಯಿಂದ X (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ವೈರಲ್ ವಿಡಿಯೋ , TTE ಮತ್ತು ಪೊಲೀಸ್ ನಡುವಿನ ವಾಗ್ವಾದವನ್ನು ತೋರಿಸುತ್ತದೆ. ದೃಶ್ಯಾವಳಿಯಲ್ಲಿ ಕಂಡುಬರುವಂತೆ, ಟಿಟಿಇ, ಎಲ್ಲಾ ಪ್ರಯಾಣಿಕರು ಮಾನ್ಯವಾದ ಟಿಕೆಟ್‌ಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಯನ್ನು ಕೇಳಿದ್ದು, ಟಿಕೆಟ್‌ ಇಲ್ಲದ ಕಾರಣ ಸೀಟು ಬಿಟ್ಟುಕೊಡುವಂತೆ ವಿನಂತಿಸುತ್ತಾನೆ. ಇದನ್ನು ಪಾಲಿಸುವ ಬದಲು, ಪೊಲೀಸ್ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದ್ದು, ಇದು ಮಾತಿನ ಘರ್ಷಣೆಗೆ ಕಾರಣವಾಗುತ್ತದೆ.

ವೈರಲ್ ವೀಡಿಯೊ ಆನ್‌ಲೈನ್‌ನಲ್ಲಿ 56,000 ವೀಕ್ಷಣೆಗಳನ್ನು ಪಡೆದಿರುವುದಲ್ಲದೇ ಹಲವಾರು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಒಬ್ಬ ಕಾಮೆಂಟರ್, “ನಿಯಮಗಳು ಎಲ್ಲರಿಗೂ ಒಂದೇ. ನೀವು ಕಲೆಕ್ಟರ್ ಅಥವಾ ಸಿಎಂ ಆಗಿರಲಿ, ಎಲ್ಲರೂ ಅದನ್ನು ಅನುಸರಿಸಬೇಕು ಎಂದರೆ ಮತ್ತೊಬ್ಬರು, “ಒಳ್ಳೆಯದು ! ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ” ಎಂದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read