ಕ್ಯಾನ್ಸರ್​ ರೋಗಿಗಳಿಗೆ ನೀಡಲು ಕೂದಲು ಕತ್ತರಿಸಿದ ವಧು: ಎಲ್ಲೆಡೆ ಶ್ಲಾಘನೆ

ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಟ್ರೆಂಡ್‌ಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಕೆಲವರು ಸಂಭ್ರಮವನ್ನು ಇಷ್ಟಪಟ್ಟರೆ, ಇತರರು ಅದರೊಂದಿಗೆ ಬರುವ ಸಾಮಾಜಿಕ ಮಾಧ್ಯಮ ವೈರಲ್ ಪ್ರವೃತ್ತಿಯನ್ನು ಆನಂದಿಸುತ್ತಾರೆ.

ಆದಾಗ್ಯೂ, ಈ ಟ್ರೆಂಡ್‌ಗಳಿಗಿಂತ ಭಿನ್ನವಾಗಿ, ವಧು ತುಂಬಾ ವಿಭಿನ್ನವಾದದ್ದನ್ನು ಮಾಡಿದ್ದಾಳೆ ಮತ್ತು ನೆಟ್ಟಿಗರ ಮನ ಗೆದ್ದಿದ್ದಾಳೆ. ಅದೇನೆಂದರೆ, ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಲು ಮದುವೆಯ ದಿನ ವಧು ಕೂದಲು ಕತ್ತರಿಸಿಕೊಂಡಿದ್ದಾಳೆ.

ವಧು ತನ್ನ ರಿಸೆಪ್ಷನ್ ಪಾರ್ಟಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಲು ತನ್ನ ಕೂದಲನ್ನು ಕತ್ತರಿಸುವುದಾಗಿ ಘೋಷಿಸಿರುವ ವಿಡಿಯೋ ವೈರಲ್​ ಆಗಿದೆ. ವಿಡಿಯೋವನ್ನು ಮಿಚಿಗನ್ ವೆಡ್ಡಿಂಗ್ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಮತ್ತು ಬ್ರಿಯಾನಾ ಎಸ್ಲಿಂಗರ್ ಅವರು ಜಂಟಿಯಾಗಿ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ವಧು, ಮದುವೆಯ ಉಡುಪನ್ನು ಧರಿಸಿ, ಪಾರ್ಟಿಗೆ ಬರುತ್ತಾಳೆ. ಅಲ್ಲಿ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಲು ತನ್ನ ಉದ್ದನೆಯ ಕೂದಲನ್ನು ಕತ್ತರಿಸುವುದಾಗಿ ಘೋಷಿಸುತ್ತಾಳೆ. ಇಲ್ಲಿ ನಾನು ನನ್ನ ಮದುವೆಯ ದಿನ ಕೂದಲನ್ನು ತೆಗೆಯುತ್ತಿದ್ದೇನೆ ಮತ್ತು ನಾನು ಅವನ್ನು ಕ್ಯಾನ್ಸರ್​ ರೋಗಿಗೆ ದಾನ ಮಾಡುತ್ತಿದ್ದೇನೆ,” ಎನ್ನುತ್ತಾಳೆ.

ಇದು ನೆಟ್ಟಿಗರ ಮನಸ್ಸು ಗೆದ್ದಿದ್ದು, ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಎಲ್ಲರೂ ವಧುವನ್ನು ಅಭಿನಂದಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read