ಭಾರತೀಯ ಮದುವೆ ನೃತ್ಯಕ್ಕೆ ಮನಸೋತು ಕಲಿತ ಬೆಲ್ಜಿಯಂ ಯುವಕ: ವಿಡಿಯೋ ವೈರಲ್

ಭಾರತದಲ್ಲಿ ವಿವಾಹಗಳಲ್ಲಿ ಈಗ ಸಂಗೀತ, ನೃತ್ಯ ಮಾಮೂಲು ಆಗಿದೆ. ಇಂಥ ವಿಡಿಯೋಗಳು ಆಗಾಗ್ಗೆ ವೈರಲ್​ ಆಗುತ್ತಲೂ ಇರುತ್ತವೆ. ಇದೇ ಬೆಲ್ಜಿಯಂನ ವ್ಯಕ್ತಿಯೊಬ್ಬರನ್ನು ಸೆಳೆದಿದೆ. ಭಾರತೀಯ ವಿವಾಹವನ್ನು ವಿಶಿಷ್ಟವಾದ ದೇಸಿ ಶೈಲಿಯಲ್ಲಿ ಆನಂದಿಸಲು ಈತ ಬಯಸಿದ್ದು, ಇಲ್ಲಿಯ ನೃತ್ಯ ವಿಧಾನವನ್ನು ಕಲಿತಿದ್ದಾನೆ. ಇದರ ವಿಡಿಯೋ ವೈರಲ್​ ಆಗಿದೆ.

ಎಡ್ ಪೀಪಲ್ ಎಂಬ ಬೆಲ್ಜಿಯಂನ ಕಂಟೆಂಟ್ ಕ್ರಿಯೇಟರ್ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಬೆಲ್ಜಿಯಂ ವ್ಯಕ್ತಿ ಭಾರತೀಯ ಮದುವೆಯಲ್ಲಿ ಹೇಗೆ ನೃತ್ಯ ಮಾಡಬೇಕು ಎಂದು ಕಲಿಯುತ್ತಿರುವ ಇಂಟರೆಸ್ಟಿಂಗ್​ ವಿಡಿಯೋ ಇದಾಗಿದೆ ಎಂದಿದ್ದಾರೆ.

ವೀಡಿಯೊದಲ್ಲಿ, ಬೆಲ್ಜಿಯಂ ವ್ಯಕ್ತಿ ಭಾರತೀಯ ವಿವಾಹಗಳಲ್ಲಿ ಜನಪ್ರಿಯವಾಗಿರುವ ವಿಭಿನ್ನ ನೃತ್ಯ ಚಲನೆಗಳು ಮತ್ತು ಭಂಗಿಗಳನ್ನು ಕಲಿಯುವುದನ್ನು ನೋಡಬಹುದು. ಹೃದಯಾಂತರಾಳದಿಂದ ಈಗ ಇಲ್ಲಿಯ ಪದ್ಧತಿಗೆ ತಕ್ಕಂತೆ ನೃತ್ಯ ಮಾಡುವುದನ್ನು ಮತ್ತು ಸಂಪೂರ್ಣವಾಗಿ ಆನಂದಿಸುವುದನ್ನು ಕಾಣಬಹುದು.

ವೀಡಿಯೊವನ್ನು ಹಂಚಿಕೊಂಡಾಗಿನಿಂದ 3.4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, ಜನರು ಈತನ ನೃತ್ಯ ಶೈಲಿಗೆ ಮನಸೋತಿದ್ದಾರೆ. ಭಾರತೀಯ ನೃತ್ಯವೆಂದರೆ ಹಾಗೆನೇ. ಎಲ್ಲರಿಗೂ ಇದು ಇಷ್ಟವಾಗುತ್ತದೆ ಎಂದಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read