ಕೋತಿ ಮತ್ತು ಮನುಷ್ಯರಿಗೆ ಅದೇನೋ ಅವಿನಾಭಾವ ಸಂಬಂಧ. ಮಂಗನಿಂದ ಮಾನವ ಎನ್ನುವ ಮಾತು ನಿಜವೇ ಎನ್ನುವಷ್ಟರ ಮಟ್ಟಿಗೆ ಕೆಲವೊಂದು ಘಟನೆಗಳು ನಡೆಯುತ್ತವೆ. ಅಂಥದ್ದೇ ಒಂದು ಕ್ಯೂಟ್ ವಿಡಿಯೋ ಇದೀಗ ವೈರಲ್ ಆಗಿದೆ.
ಮರದಿಂದ ಕೆಳಕ್ಕೆ ಬಿದ್ದ ಮರಿಯೊಂದನ್ನು ದಾರಿಹೋಕ ರಕ್ಷಿಸಿದ ಬಳಿಕ ಈ ವಿಡಿಯೋ ಮಾಡಲಾಗಿದೆ. ಮರಿಯನ್ನು ರಕ್ಷಿಸಿದಾತ ಅದನ್ನು ಮರದ ಮೇಲೆ ಬಿಡಲು ನೋಡುತ್ತಾನೆ. ಆದರೆ ಮರಿ ರಕ್ಷಕನನ್ನು ಬಿಟ್ಟು ಹೋಗುವ ಮನಸ್ಸು ಮಾಡುವುದಿಲ್ಲ. ಚಿಕ್ಕ ಮಕ್ಕಳು ಅಪ್ಪನ ಮೈಮೇಲೆ ಇದ್ದಾಗ ಬೇರೆ ಕಡೆ ಹೋಗಲು ಹೇಗೆ ಮಾಡುತ್ತಾರೋ ಹಾಗೇ ಈ ಕೋತಿಮರಿಯೂ ಮಾಡಿದೆ.
ನಂತರ ರಕ್ಷಕ ಅದನ್ನು ಕಷ್ಟಪಟ್ಟು ಮರದ ಮೇಲೆ ಇಡುತ್ತಾನೆ. ಮರವೇರಿದ ಬಳಿಕ ಅದು ಸರಸರನೆ ಮರದ ತುದಿಗೆ ಹೋಗುತ್ತದೆ. ಈ ಕ್ಯೂಟ್ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಈ ವೀಡಿಯೊವನ್ನು ನಾಗಾ ಹಿಲ್ಸ್‌ನ ಟ್ವಿಟರ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ, ಇದು ನಾಗಾಲ್ಯಾಂಡ್‌ನ ಖೋನೋಮಾ ಗ್ರಾಮದ ಅರಣ್ಯದಲ್ಲಿ ಘಟನೆ ನಡೆದಿದೆ ಎಂದು ಟ್ವಿಟರ್ನಲ್ಲಿ ಹೇಳಲಾಗಿದೆ.
https://twitter.com/Hillsnaga/status/1635475538880937984?ref_src=twsrc%5Etfw%7Ctwcamp%5Etweetembed%7Ctwterm%5E1635475538880937984%7Ctwgr%5E4c9f03856f66dade135a4129354f458e9a7a48e6%7Ctwcon%5Es1_&ref_url=https%3A%2F%2Fwww.news18.com%2Fbuzz%2Fviral-video-baby-monkey-refusing-to-leave-its-rescuers-is-pure-love-7308895.html
https://twitter.com/mhonshann/status/1635492281104089090?ref_src=twsrc%5Etfw%7Ctwcamp%5Etweetembed%7Ctwt
https://twitter.com/supriyasahuias/status/1514101785081745414?ref_src=twsrc%5Etfw%7Ctwcamp%5Etweetembed%7Ctwterm%5E1514101785081745414%7Ctwgr%5E4c9f03856f66dade135a4129354f458e9a7a48e6%7Ctwcon%5Es1_&ref_url=https%3A%2F%2Fwww.news18.com%2Fbuzz%2Fviral-video-baby-monkey-refusing-to-leave-its-rescuers-is-pure-love-7308895.html