ಗೋವಾ ಬೀಚ್​ನಲ್ಲಿ ಬೆತ್ತಲೆಯಾಗಿ ತಿರುಗಿದ ವ್ಯಕ್ತಿಗೆ ಸ್ಥಳೀಯರಿಂದ ಕ್ಲಾಸ್​; ವಿಡಿಯೋ ವೈರಲ್

ಗೋವಾ ಬೀಚ್​ ಎಂದರೆ ಅಲ್ಲಿ ಸಾಮಾನ್ಯವಾಗಿ ಅರೆ ಬೆತ್ತಲೆಯವರ ದರ್ಶನ ಕಾಣಸಿಗುತ್ತದೆ. ಇದೀಗ ಯುರೋಪ್‌ನಿಂದ ಭಾರತಕ್ಕೆ ಭೇಟಿ ನೀಡಿದ ವ್ಯಕ್ತಿಯೊಬ್ಬ ಗೋವಾ ಬೀಚ್‌ನಲ್ಲಿ ಬಹುತೇಕ ಬೆತ್ತಲೆಯಾಗಿ ತಿರುಗಾಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಗೋವಾ ಮೂಲದ ಸುದ್ದಿ ಔಟ್ಲೆಟ್ ಈ ವಿಡಿಯೋ ಶೇರ್​ ಮಾಡಿದೆ.

ವಿದೇಶಿಯರ ವರ್ತನೆಯನ್ನು ಖಂಡಿಸಿದ ಸ್ಥಳೀಯರ ನಡುವಿನ ಸಂಭಾಷಣೆಯನ್ನು ವಿಡಿಯೋದಲ್ಲಿ ಕೇಳಬಹುದು. ಗ್ರಾಮದ ಸ್ಥಳೀಯರೊಬ್ಬರು ಯುರೋಪಿಯನ್ ವ್ಯಕ್ತಿ ಪದೇ ಪದೇ ಇದೇ ರೀತಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಒಂದೆರಡು ವರ್ಷಗಳ ಹಿಂದೆ ಗೋವಾ ಭೇಟಿಯ ಸಂದರ್ಭದಲ್ಲಿ ಅದೇ ರೀತಿ ಮಾಡಿದ್ದಾನೆ ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ಅವನ ಜೊತೆ ಮಾತಿನ ಚಕಮಕಿ ನಡೆದ ನಂತರ ಅವನ ದೇಹವನ್ನು ಮುಚ್ಚುವಂತೆ ಮಾಡಲಾಗಿದೆ.

“ನೀವು ಯಾಕೆ ಈ ರೀತಿ ಧರಿಸಿದ್ದೀರಿ? ಇದು ನ್ಯಾಯವಲ್ಲ. ಇದು ನನ್ನ ಹಳ್ಳಿ. ನಮ್ಮ ಮಕ್ಕಳು ಸಮುದ್ರತೀರದಲ್ಲಿ ವಾಸಿಸುತ್ತಾರೆ. ಈ ರೀತಿ ಅಸಭ್ಯವಾಗಿ ವರ್ತಿಸಬೇಡಿ” ಎಂದು ಸ್ಥಳೀಯ ವ್ಯಕ್ತಿ ಹೇಳುವುದನ್ನು ಕೂಡ ವಿಡಿಯೋದಲ್ಲಿ ಕೇಳಬಹುದು. “ಎರಡು ವರ್ಷಗಳ ಹಿಂದೆ ನೀವು ಇದನ್ನು ಎಂದಿಗೂ ಮಾಡುವುದಿಲ್ಲ ಎಂದು ಹೇಳಿದ್ದೀರಿ. ನೀವು ಯುರೋಪಿನಲ್ಲಿ ಅದೇ ಕೆಲಸವನ್ನು ಮಾಡುತ್ತಿದ್ದೀರಾ? ಸ್ವಲ್ಪ ಯೋಚಿಸಿ, ನಾನು ಪೊಲೀಸರಿಗೆ ಕರೆ ಮಾಡುತ್ತೇನೆ” ಎಂದು ವ್ಯಕ್ತಿಯೊಬ್ಬ ಮಾತನಾಡುವುದನ್ನೂ ಕೇಳಬಹುದಾಗಿದೆ.

https://twitter.com/InGoa24x7/status/1617837482443427840?ref_src=twsrc%5Etfw%7Ctwcamp%5Etweetembed%7Ctwterm%5E1617837482443427840%7Ctwgr%5Edcd2f12a962a9aba8912cf2d521828c7d5b2bfd9%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fviral-video-almost-naked-european-man-roams-in-g-string-thong-on-goa-beach-local-confronts-him

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read