ʼಬಾಲ್ಯʼ ದ ದಿನಗಳನ್ನು ನೆನಪಿಸುತ್ತೆ ಈ ವಿಡಿಯೋ

ಆಪ್ತ ಸ್ನೇಹಿತರ ಗುಂಪೆಂದರೇ ಹಾಗೆ. ಮೋಜು, ಚೇಷ್ಟೆ, ಮಸ್ತಿ, ಪರಸ್ಪರರ ಕಾಲೆಳೆಯುವುದು, ಗಂಭೀರ ಚರ್ಚೆಗಳೆಲ್ಲವೂ ಮೇಳೈಸುತ್ತವೆ.

ನಮ್ಮ ಬಾಲ್ಯದಾಟವನ್ನು ನೆನಪಿಸುವ ರೀತಿಯಲ್ಲಿ ಆರು ಸ್ನೇಹಿತರು ಮರವೊಂದರ ಕೊಂಬೆಗಳಿಗೆ ನೇತುಹಾಕಿಕೊಂಡು ಆಟವಾಡುತ್ತಿರುವ ರೀಲ್ಸ್‌ ಒಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಮರದ ಕೊಂಬೆಯನ್ನು ಇವರು ಕೆಳಗೆ ಎಳೆಯಲು ಯತ್ನಿಸಿದಂತೆ ಆ ಕೊಂಬೆ ಮೇಲ್ಮುಖವಾಗಿ ಹೋಗಲು ಯತ್ನಿಸುತ್ತಿದೆ.

ಹೀಗೇ ಆಗುವಾಗ, ಐವರು ಸ್ನೇಹಿತರು ಒಂದೇ ಬಾರಿಗೆ ಮರದ ಕೊಂಬೆಯನ್ನು ಬಿಟ್ಟು ಕೆಳಗೆ ಜಿಗಿಯುವ ಮೂಲಕ ಆರನೇ ಸ್ನೇಹಿತನನ್ನು ಕೊಂಬೆಯ ಹಿಮ್ಮುಖ ಏರಿಕೆಯಲ್ಲಿ ಇನ್ನಷ್ಟು ಮೇಲಕ್ಕೆ ಎಗರಿ, ನಿಯಂತ್ರಣ ತಪ್ಪಿ ಕೆಳಗೆ ಬೀಳುವಂತೆ ಮಾಡುತ್ತಾರೆ. ಹೀಗೆ ನಿಯಂತ್ರಣ ತಪ್ಪಿ ಬಿದ್ದ ಗೆಳೆಯನನ್ನು ನೋಡಿ ಆಡಿಕೊಂಡು ಮಿಕ್ಕವರೆಲ್ಲಾ ನಗುತ್ತಿರುವುದನ್ನು ನೋಡಬಹುದಾಗಿದೆ.

ವಿಡಿಯೋವನ್ನು ಕಂಡ ನೆಟ್ಟಿಗರು ತಮ್ಮ ಬಾಲ್ಯದ ದಿನಗಳಲ್ಲೂ ಇಂಥ ಚೇಷ್ಟೆಗಳನ್ನು ಮಾಡಿದ್ದನ್ನು ನೆನೆಪಿಸಿಕೊಂಡು ಕಾಮೆಂಟ್‌ಗಳಲ್ಲಿ ಅವುಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read