ಪಾಕಿಸ್ತಾನದಲ್ಲಿ ಪೊಲೀಸನಿಂದಲೇ ಹೀನ ಕೃತ್ಯ ; ಅತ್ಯಾಚಾರವೆಸಗುವಾಗ ರಕ್ಷಿಸಲು ಬಂದವನಿಗೆ ಗುಂಡೇಟು | Shocking Video

ಪಾಕಿಸ್ತಾನದಿಂದ ಒಂದು ಆಘಾತಕಾರಿ ವಿಡಿಯೋ ಬಹಿರಂಗವಾಗಿದೆ. ಇದರಲ್ಲಿ ಒಬ್ಬ ಪೊಲೀಸ್ ತನ್ನ ಕಾಮುಕ ಕೃತ್ಯದಿಂದ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾನೆ.

ಈ ವಿಡಿಯೋದಲ್ಲಿ, ಪೊಲೀಸ್ ಒಬ್ಬ ಮಹಿಳೆಯನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ಬಲವಂತವಾಗಿ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಿದ್ದಾನೆ.

ಮಹಿಳೆಯ ಕೂಗು ಕೇಳಿ ಯುವಕನೊಬ್ಬ ಆಕೆಯನ್ನು ರಕ್ಷಿಸಲು ಬಂದಾಗ, ಪೊಲೀಸ್ ಆತನ ಮೇಲೆ ಗುಂಡು ಹಾರಿಸಿದ್ದಾನೆ. ಈ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮಾಹಿತಿಯ ಪ್ರಕಾರ, ಮುಹಮ್ಮದ್ ಅಹ್ಮದ್‌ ಎಂಬ ಪೊಲೀಸ್, ಮಹಿಳೆಯನ್ನು ಹಿಡಿದು ಬಂದೂಕು ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ.

ಅಲ್ಲಿ ಆಕೆ ಜೊತೆ ಬಲವಂತವಾಗಿ ಸಂಬಂಧ ಬೆಳೆಸಲು ಪ್ರಯತ್ನಿಸಿದ್ದು, ಮಹಿಳೆ ಕೂಗಾಡಲು ಪ್ರಾರಂಭಿಸಿದ್ದಾಳೆ. ಮಹಿಳೆಯ ಕೂಗು ಕೇಳಿ ಅಲ್ಲಿಗೆ ಬಂದ ಯುವಕ ಈ ಘಟನೆಯ ವಿಡಿಯೋ ಮಾಡಲು ಪ್ರಾರಂಭಿಸಿದಾಗ ಪೊಲೀಸ್ ಆತನ ಮೇಲೆ ಗುಂಡು ಹಾರಿಸಿದ್ದಾನೆ.

ಗುಂಡು ತಗುಲಿ ಯುವಕ ಗಾಯಗೊಂಡಿದ್ದು, ಗುಂಡಿನ ಶಬ್ದ ಕೇಳಿ ಸುತ್ತಮುತ್ತಲಿನ ಜನರು ಅಲ್ಲಿಗೆ ಧಾವಿಸಿ ಯುವಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸರ ಈ ಹೇಯ ಕೃತ್ಯವನ್ನು ಅವರು ಖಂಡಿಸಿದ್ದು, ಸ್ಥಳೀಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆದಾಗ್ಯೂ, ಇನ್ನೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರು ಇದನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read