ಕುಲ್ಫಿ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಆದರೆ ಎಂದಾದರೂ ಬಿಸಿಬಿಸಿ ಕುಲ್ಫಿ ತಿಂದಿರುವಿರಾ? ಇದೇನಿದು ಕುಲ್ಫಿ ಬಿಸಿಬಿಸಿಯೇ ಎಂದು ಎನಿಸಬಹುದು. ನೀವು ಅಂದುಕೊಂಡದ್ದು ನಿಜ. ಬಿಸಿಬಿಸಿ ಕುಲ್ಫಿ ಮಾತ್ರವಲ್ಲದೇ ಸಾಂಬಾರ್ನಲ್ಲಿಯೂ ಅದ್ದುಕೊಂಡು ಕುಲ್ಫಿ ತಿನ್ನಬೇಕು.
ನೀವು ಕೇಳ್ತಿರೋದು ನಿಜ. ಹಾಗಾದರೆ ಇದೆಂಥ ಕುಲ್ಫಿ ಎಂದ್ರಾ ? ಅಸಲಿಗೆ ಇದು ಐಸ್ಕ್ರೀಮ್ ಕುಲ್ಫಿ ಅಲ್ಲ. ಬದಲಿಗೆ ಕುಲ್ಫಿ ರೂಪದ ಇಡ್ಲಿ. ಹೌದು, ಇಲ್ಲಿ ಕಾಣಿಸ್ತಿರೋದು ಇಡ್ಲಿ. ಕುಲ್ಫಿ ರೂಪದಲ್ಲಿಯೇ ಇಡ್ಲಿಯನ್ನು ತಯಾರು ಮಾಡಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಫೋಟೋದಲ್ಲಿ ಇಡ್ಲಿಗಳು ಒಂದು ಕಡ್ಡಿ ಹೊಂದಿರುವುದನ್ನು ನೋಡಬಹುದು. ಇದರಿಂದ ಅದು ಐಸ್ ಕ್ರೀಮ್ನಂತೆ ಕಾಣಿಸುತ್ತದೆ. ದಕ್ಷಿಣ ಭಾರತದ ಪಾಕಪದ್ಧತಿಯು ಅದರ ನೋಟದಲ್ಲಿ ಮಾತ್ರ ನವೀನತೆಯನ್ನು ಪಡೆದುಕೊಂಡಿದೆ ಮತ್ತು ಬೇರೇನೂ ಇಲ್ಲ. ಇದನ್ನು ಸಾಂಬಾರಿನಲ್ಲಿ ಅದ್ದುವುದನ್ನು ನಾವು ನೋಡಬಹುದು. ಇದನ್ನು ತಿಳಿದ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.
Kulfi Idli ♥️
©️ dilsefood .in pic.twitter.com/Hxfzt71epw— Visit Udupi (@VisitUdupi) January 27, 2023