ಕಂಠಪೂರ್ತಿ ಮದ್ಯ ಸೇವಿಸಿದ್ದ ಪೊಲೀಸನ ಪುಂಡಾಟ; ಹಾಡಹಗಲೇ ʼಕೊತ್ತಂಬರಿʼ ಕಳ್ಳತನ | Watch Video

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಓರ್ವ ಪೊಲೀಸ್ ಕುಡಿದ ಸ್ಥಿತಿಯಲ್ಲಿ ತರಕಾರಿ ಅಂಗಡಿಯಿಂದ ಕೊತ್ತಂಬರಿ ಸೊಪ್ಪನ್ನು ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ.

ವಿಡಿಯೋದಲ್ಲಿ, ಪೊಲೀಸನೊಬ್ಬ ತರಕಾರಿ ಮಾರುತ್ತಿದ್ದ ಗಾಡಿ ಬಳಿ ಬಂದು, ಅಲ್ಲಿಂದ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳುತ್ತಾನೆ. ಆತನ ವರ್ತನೆ ನೋಡಿದರೆ ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ಈ ಘಟನೆಯನ್ನು ಯಾರೋ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಕೊತ್ತಂಬರಿ ತೆಗೆದುಕೊಂಡ ನಂತರ, ಪೊಲೀಸ್ ಅಲ್ಲಿಂದ ಹೊರಡಲು ಪ್ರಾರಂಭಿಸುತ್ತಾನೆ. ಆದರೆ, ವಿಡಿಯೋ ಮಾಡುತ್ತಿರುವ ವ್ಯಕ್ತಿಯನ್ನು ನೋಡಿದ ತಕ್ಷಣ ಮತ್ತೆ ಕೊತ್ತಂಬರಿ ಸೊಪ್ಪನ್ನು ಗಾಡಿಗೆ ವಾಪಾಸ್‌ ಹಾಕಲು ಹೋಗುತ್ತಾನೆ. ವಿಡಿಯೋ ಇಲ್ಲಿಗೆ ಮುಕ್ತಾಯವಾಗಿದ್ದು, ಮುಂದೆ ಏನಾಯಿತು ಎಂಬುದು ತಿಳಿದಿಲ್ಲ.

ಈ ವಿಡಿಯೋ ವೈರಲ್ ಆದ ತಕ್ಷಣ, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದು, ಕೆಲವರು ಪೊಲೀಸನ ಈ ನಡವಳಿಕೆಯನ್ನು ಖಂಡಿಸಿದ್ದಾರೆ, ಇನ್ನು ಕೆಲವರು ಇದನ್ನು ಹಾಸ್ಯವಾಗಿ ತೆಗೆದುಕೊಂಡಿದ್ದು, “ಪೊಲೀಸರು ಈಗ ತರಕಾರಿಯನ್ನು ಸಹ ಉಚಿತವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆಯೇ?” ಎಂದು ಪ್ರಶ್ನಿಸಿದ್ದಾರೆ.

ಅಂದ ಹಾಗೆ ಈ ವೈರಲ್ ವಿಡಿಯೋದ ಸ್ಥಳ ಮತ್ತು ಸಮಯ ಇನ್ನೂ ಖಚಿತವಾಗಿಲ್ಲ. ಆದರೂ, ಸಾಮಾಜಿಕ ಜಾಲತಾಣದಲ್ಲಿ ಜನರು ಸಂಬಂಧಿತ ಆಡಳಿತವು ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read