ನಾಗರಗಾವಿನ ತಲೆಗೆ ಚುಂಬಿಸಲು ಪ್ರಯತ್ನಿಸಿದ ವ್ಯಕ್ತಿಗೆ ಹುಡುಗಾಟವೇ ಮುಳುವಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆಯ ವ್ಯಕ್ತಿಯೊಬ್ಬ ತಾನು ರಕ್ಷಿಸಿದ ನಾಗರ ಹಾವಿಗೆ ಮುತ್ತಿಡಲು ಯತ್ನಿಸಿದ್ದಾನೆ. ಆದರೆ, ಹಾವು ತಲೆಯನ್ನು ಹಿಂದಕ್ಕೆ ತಿರುಗಿಸಿ ತುಟಿಗೆ ಕಚ್ಚಿದೆ. ಹಾವು ಕಚ್ಚಿದ ನಂತರ, ಸರೀಸೃಪವು ಅವನ ಕೈಯಿಂದ ಜಾರಿತು.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ಘಟನೆಯ ಬಗ್ಗೆ ಟೀಕೆ ಮಾಡಿದ್ದಾರೆ. ಬಳಕೆದಾರರಲ್ಲಿ ಒಬ್ಬರು, ಆತ ಪ್ರೀತಿಯ ಕಡಿತಕ್ಕೆ ಅರ್ಹ. ಹಾವಿಗೆ ನನ್ನ ಸಂಪೂರ್ಣ ಬೆಂಬಲ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರ, ಯಾವುದೇ ಜೀವಿಯು ಸಂಕಷ್ಟದಲ್ಲಿರುವುದನ್ನು ನೋಡುವುದು ಯಾವಾಗಲೂ ಅಶಾಂತಿಯನ್ನುಂಟುಮಾಡುತ್ತದೆ. ಎಲ್ಲರ ಸುರಕ್ಷತೆಗಾಗಿ ನಾವು ಆಶಿಸೋಣ ಎಂದು ಹೇಳಿದ್ದಾರೆ.
This is horrible💀
pic.twitter.com/nk52HatJsN— Ghar Ke Kalesh (@gharkekalesh) March 28, 2024