BIG NEWS : ‘ವಿನೇಶ್ ಪೋಗಟ್’ ಅನರ್ಹತೆ : ವಿವಾದ ಸೃಷ್ಟಿಸಿದ ನಟ ‘ಪ್ರಕಾಶ್ ರೈ’ ಕಾರ್ಟೂನ್ ಪೋಸ್ಟ್

ಭಾರತೀಯ ಕುಸ್ತಿಪಟು ‘ವಿನೇಶ್ ಪೋಗಟ್’ ಅನರ್ಹತೆ ವಿಚಾರಕ್ಕೆ ಭಾರತದ ಕೋಟ್ಯಾಂತರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದರ ನಡುವೆ ನಟ ‘ಪ್ರಕಾಶ್ ರೈ’ ಮಾಡಿದ ಕಾರ್ಟೂನ್ ಪೋಸ್ಟ್ ಒಂದು ವಿವಾದ ಸೃಷ್ಟಿಸಿದೆ. ಪ್ರಕಾಶ್ ರೈ ಪೋಸ್ಟ್ ನಲ್ಲಿ ‘ ವಿನೇಶ್ ಪೋಗಟ್ ತೂಕ ತಪಾಸಣೆ ಮಾಡುವಾಗ ಹಿಂದಿನಿಂದ ಒಬ್ಬ ವ್ಯಕ್ತಿ ತೂಕದ ಯಂತ್ರದ ಮೇಲೆ ಒಂದು ಕಾಲನ್ನು ಇಟ್ಟಿರುವುದನ್ನು ಕಾಣಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು..? ಕಾಲು ಇಟ್ಟಿರುವ ವ್ಯಕ್ತಿ ಯಾರು ಎಂದು ಊಹಿಸಿ ಎಂದು ಪ್ರಕಾಶ್ ರೈ ಪೋಸ್ಟ್ ಮಾಡಿದ್ದಾರೆ.

ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಗುರುವಾರ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು. ವಿನೇಶ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.  ಅಮ್ಮಾ, ಕುಸ್ತಿ ನನ್ನನ್ನು ಸೋಲಿಸಿದೆ, ನಾನು ಸೋತಿದ್ದೇನೆ. ನಾನು ಸೋತಿದ್ದೇನೆ … ನನ್ನ ಧೈರ್ಯವು ಮುರಿದುಹೋಗಿದೆ, ನನಗೆ ಈಗ ಯಾವುದೇ ಶಕ್ತಿ ಇಲ್ಲ ಎಂದು ವಿನೇಶ್  ಬರೆದಿದ್ದಾರೆ.

https://twitter.com/prakashraaj/status/1821217559233884491

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read