ಇಂದು ಬಿಡುಗಡೆಯಾಗಲಿದೆ ವಿನಯ್ ರಾಜಕುಮಾರ್ ನಟನೆಯ ‘ಪೆಪೆ’ ಚಿತ್ರದ ಟ್ರೈಲರ್

ವಿನಯ್ ರಾಜಕುಮಾರ್ ಅಭಿನಯದ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಚಿತ್ರ ಇದೇ ಆಗಸ್ಟ್ 30ಕ್ಕೆ ತೆರೆ ಕಾಣಲಿದ್ದು, ಇದರ ಟ್ರೈಲರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಟ್ರೈಲರ್ ರಿಲೀಸ್ ಇವೆಂಟ್ ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ದುನಿಯಾ ವಿಜಯ್ ಆಗಮಿಸಲಿದ್ದಾರೆ.

ಈ ಚಿತ್ರವನ್ನು ಉದಯ ಶಂಕರ್ ಎಸ್ ತಮ್ಮ ಉದಯ್ ಸಿನಿ ವೆಂಚರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ವಿನಯ್ ರಾಜಕುಮಾರ್ ಸೇರಿದಂತೆ ಯಶ್ ಶೆಟ್ಟಿ, ಬಾಲ ರಾಜವಾಡಿ, ಮೇದಿನಿ ಕೆಳಮನೆ, ಕಾಜಲ್ ಕುಂದರ್, ಸಂದ್ಯಾ ಅರೆಕೆರೆ, ಕಿಟ್ಟಿ ಶ್ರೀಧರ್ ಬಣ್ಣ ಹಚ್ಚಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ನೀಡಿದ್ದು, ಮನು ಶೇಡ್ಗಾರ್ ಸಂಕಲನ, ಚೇತನ್ ಡಿಸೋಜಾ ಹಾಗೂ ನರಸಿಂಹ ಅವರ ಸಾಹಸ ನಿರ್ದೇಶನವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read