ಯುವತಿಯ ಅರೆನಗ್ನ ಮೆರವಣಿಗೆ ಮಾಡಿದ ವಿಡಿಯೋ ವೈರಲ್; ಇಲ್ಲಿದೆ ಘಟನೆ ಹಿಂದಿನ ಅಸಲಿ ಸತ್ಯ

ಮೊಬೈಲ್ ನಲ್ಲಿ ಇಂಟರ್ನೆಟ್ ಸೇವೆ ಬಂದಾಗಿನಿಂದ ಅನೇಕ ವಿಡಿಯೋಗಳು ಹರಿದಾಡುತ್ತಿರುತ್ತವೆ. ಯಾವುದು ಸತ್ಯ, ಯಾವುದು ಸುಳ್ಳು? ಎಂದು ಪತ್ತೆಹಚ್ಚುವ ಗೋಜಿಗೇ ಹೋಗದೆ ಕೆಲವರು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೋವೊಂದರಲ್ಲಿ ಯುವತಿಯೊಬ್ಬಳನ್ನು ಥಳಿಸಿ ಅರೆನಗ್ನವಾಗಿ ಮೆರವಣಿಗೆ ಮಾಡಿರುವ ಗೊಂದಲದ ವಿಡಿಯೋ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಗ್ರಾಮದಲ್ಲಿ ಉದ್ರಿಕ್ತರು ಯುವತಿಯನ್ನು ಅರೆಬೆತ್ತಲೆಯಾಗಿ ಥಳಿಸಿ ಮೆರವಣಿಗೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಈ ವಿಡಿಯೋದ ಅಸಲಿತನ ಬೇರೆಯದೇ ಇದೆ ಎಂದು ಗೊತ್ತಾಗಿದೆ.

ಇಂಟರ್ನೆಟ್ ಬಳಕೆದಾರರೊಬ್ಬರು ವಿಡಿಯೋ ಹಂಚಿಕೊಂಡು “ಮಹಿಳೆಯನ್ನು ಈ ರೀತಿ ಹೊಡೆಯುವುದು ತುಂಬಾ ದುಃಖಕರವಾಗಿದೆ. ಅವರಿಗೆ ಶಿಕ್ಷೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ದಯವಿಟ್ಟು ಮರು ಟ್ವೀಟ್ ಮಾಡಿ” ಎಂದು ವಿಡಿಯೋ ಹಂಚಿಕೊಡಿದ್ದಾರೆ.

ಅದೇ ರೀತಿ ಮತ್ತೊಬ್ಬ ಬಳಕೆದಾರ “ಈ ಜನರು ತುಂಬಾ ಕೀಳಾಗಿ ಕಾಣುತ್ತಿದ್ದಾರೆ. ಸಾರ್ವಜನಿಕವಾಗಿ ಮಹಿಳೆಯೊಬ್ಬರು ಈ ರೀತಿ ಬಟ್ಟೆ ಇಲ್ಲದೆ ತಿರುಗಾಡುತ್ತಿರುವುದನ್ನು ನೋಡುವುದು ಅತ್ಯಂತ ನಾಚಿಕೆಗೇಡಿನ ಘಟನೆಯಾಗಿದೆ. ಇಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಮತ್ತೆ ಇಂತಹ ಅಸಹ್ಯಕರ ಕೃತ್ಯ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ವಿಡಿಯೋ ಹಿಂದಿನ ಸತ್ಯ ಏನು ?

ವೀಡಿಯೋ ಸ್ವತಃ ಆಘಾತಕಾರಿಯಾದರೂ ಸಂಜು ಸಿಂಗ್ ಎಂಬ ಇಂಟರ್ನೆಟ್ ಬಳಕೆದಾರರು ವಿಡಿಯೋ ಪೋಸ್ಟ್ ಮಾಡಿ “ಮಧ್ಯಪ್ರದೇಶದಲ್ಲಿ, 19 ವರ್ಷದ ಹುಡುಗಿಯನ್ನು ಅವಳ ಕುಟುಂಬ ಸದಸ್ಯರು ಅಂತರ್ ಜಾತಿ ಸಂಬಂಧದ ಕಾರಣದಿಂದ ಥಳಿಸಿ ಅರೆಬೆತ್ತಲೆ ಮೆರವಣಿಗೆ ಮಾಡಿದ್ದಾರೆ.” ಎಂದಿದ್ದಾರೆ. ಈ ಪೋಸ್ಟ್ ತ್ವರಿತವಾಗಿ ಗಮನ ಸೆಳೆದು ನ್ಯಾಯಕ್ಕಾಗಿ ಕರೆ ನೀಡಿದೆ.

ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ವಿಚಾರವನ್ನು ಹಂಚಿಕೊಳ್ಳುವ ಮೊದಲು ಮಾಹಿತಿಯನ್ನು ಪರಿಶೀಲಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ತಪ್ಪು ಮಾಹಿತಿಯು ಸಾರ್ವಜನಿಕರನ್ನು ದಾರಿ ತಪ್ಪಿಸುವುದು ಮಾತ್ರವಲ್ಲದೆ ಅನಗತ್ಯ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ.

https://twitter.com/sanju_singh24/status/1838140343234990321?ref_src=twsrc%5Etfw%7Ctwcamp%5Etweetembed%7Ctwterm%5E1838140343234990321%7Ctwgr%5Ed8854d27f1f4e5a9c71bb5dad49b8e64d3f9e6ef%7Ctwcon%5Es1_&ref_url=https%3A%2F%2Fm.daily

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read