ಮದ್ಯಪ್ರಿಯರಿಗೆ ಸಿಹಿ ಸುದ್ದಿ: ಗ್ರಾಮ, ಸೂಪರ್ ಮಾರ್ಕೆಟ್ ನಲ್ಲೂ ಮದ್ಯ ಮಾರಾಟ ಮಳಿಗೆ

ಬೆಂಗಳೂರು: ರಾಜ್ಯದಲ್ಲಿ ಇನ್ನಷ್ಟು ಮದ್ಯದ ಅಂಗಡಿ ಲೈಸೆನ್ಸ್ ನೀಡಲು ಸರ್ಕಾರ ಮುಂದಾಗಿದೆ. ಮೂರು ಸಾವಿರ ಜನರು ಇರುವ ಗ್ರಾಮಗಳು, ಸೂಪರ್ ಮಾರ್ಕೆಟ್ ನಲ್ಲಿ ಮದ್ಯ ಮಾರಾಟ ಮನೆಗೆ ಮಳಿಗೆ ತೆರೆಯಲಾಗುವುದು.

ರಾಜ್ಯದಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ವಿತರಣೆಗೆ ಅಬಕಾರಿ ಇಲಾಖೆಯಿಂದ ಪ್ರಸ್ತಾವನೆ ಸಿದ್ಧಪಡಿಸಿದ್ದು, 389 ಎಂಎಸ್ಎಎಲ್ ಮದ್ಯ ಮಾರಾಟ ಮಳಿಗೆ ಆರಂಭಿಸಲಾಗುವುದು. ಮೂರು ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೊಸ ಮದ್ಯ ಮಾರಾಟ ಮಳಿಗೆ ತೆರೆಯಲಾಗುವುದು. ಸೂಪರ್ ಮಾರ್ಕೆಟ್ ಗಳಲ್ಲೂ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಅಪಕಾರಿ ಇಲಾಖೆ ಸಂಪನ್ಮೂಲ ಹೆಚ್ಚಳಕ್ಕೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಶೇಕಡ 25ರಷ್ಟು ಹೆಚ್ಚು ಶುಲ್ಕ ಪಾವತಿಸಿ ಬೇನಾಮಿ ಅಂಗಡಿಗಳನ್ನು ಸಕ್ರಮ ಮಾಡಿಕೊಳ್ಳಬಹುದು. ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಮದ್ಯದಂಗಡಿ ತೆರೆಯುವ ಪ್ರಸ್ತಾಪ ಕೂಡ ಇದೆ. ರಾಜ್ಯದಲ್ಲಿ 12,593 ಮದ್ಯದ ಅಂಗಡಿಗಳಿದ್ದು, ಮತ್ತೆ 389 ಮದ್ಯದಂಗಡಿ ತೆರೆಯಲು ತೀರ್ಮಾನಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read