ಹರಿಯಾಣದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿದ್ದ ಮಹಿಳೆಯೊಬ್ಬರು ಈಗ ಬಂದಿದ್ದೀರಾ ಎಂದು ಸಿಟ್ಟಿನಿಂದ ಶಾಸಕರ ಕೆನ್ನೆಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ಜನನಾಯಕ್ ಜನತಾ ಪಕ್ಷದ (ಜೆಜೆಪಿ) ಶಾಸಕ ಈಶ್ವರ್ ಸಿಂಗ್ ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಪ್ರವಾಹ ಪೀಡಿತ ಸಿಂಗ್ ಗುಹ್ಲಾದಲ್ಲಿ ಸಿಂಗ್ ಅವರಿಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು
ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಈಶ್ವರ್ ಸಿಂಗ್ ಭೇಟಿ ನೀಡಿದಾಗ ಗುಹ್ಲಾದಲ್ಲಿ ಅವರಿಗೆ ಪ್ರವಾಹ ಸಂತ್ರಸ್ತರು ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು, ನೀವು ಈಗ ಏಕೆ ಬಂದಿದ್ದೀರಿ?” ಎಂದು ಪ್ರವಾಹ ಸಂತ್ರಸ್ತರು ಪ್ರಶ್ನಿಸಿ ಕೆನ್ನೆಗೆ ಬಾರಿಸಿದ್ದಾರೆ.
ಹರ್ಯಾಣದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿದ್ದ ಮಹಿಳೆಯೊಬ್ಬರು ಜನನಾಯಕ್ ಜನತಾ ಪಕ್ಷದ (ಜೆಜೆಪಿ) ಶಾಸಕ ಈಶ್ವರ್ ಸಿಂಗ್ ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಎಲ್ಲಾ ಮುಗಿದ ಮೇಲೆ ಈಗ ಬರುತ್ತಿದ್ದೀರಾ ಎಂದು ಸಿಟ್ಟಿಗೆದ್ದ ಮಹಿಳೆ ಶಾಸಕರ ಕೆನ್ನೆಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಭಾರಿ ಮಳೆಯಿಂದ ಘಗ್ಗರ್ ನದಿಯು ಉಕ್ಕಿ ಹರಿಯುತ್ತಿದೆ, ಇದರಿಂದಾಗಿ ಭಾಟಿಯಾ ಗ್ರಾಮದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ವೇಳೆ ಪರಿಸ್ಥಿತಿ ವೀಕ್ಷಣೆಗೆ ಬಂದ ಶಾಸಕರ ಮೇಲೆ ಮಹಿಳೆ ಹಲ್ಲೆ ಮಾಡಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಮಹಿಳೆ ಮೇಲೆ ಯಾವ ಕ್ರಮ ಕೈಗೊಳ್ಳುವುದು ಬೇಡ ಎಂದಿದ್ದಾರೆ ಎನ್ನಲಾಗಿದೆ.
https://twitter.com/ANI/status/1679168264868626432?ref_src=twsrc%5Etfw%7Ctwcamp%5Etweetembed%7Ctwterm%5E1679168264868626432%7Ctwgr%5E34fbe02dbedd526e01add5b29cca55314bd2a482%7Ctwcon%5Es1_&ref_url=https%3A%2F%2Fwww.news18.com%2Findia%2Fharyana-floods-rain-woman-slaps-jjp-mla-ishwar-singh-flood-affected-areas-watch-viral-video-8319421.html