ಬೆಂಗಳೂರು: ಅನಗತ್ಯವಾಗಿ ಆರ್.ಎಸ್.ಎಸ್ ಟೀಕಿಸುವುದು ಸರಿಯಲ್ಲ. ಸಚಿವ ಪ್ರಿಯಾಂಕ್ ಖರ್ಗೆಗೆ ಯಾಕೀ ದುರ್ಬುದ್ಧಿ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪ್ರಿಯಾಂಕ್ ಖರ್ಗೆ ಪ್ರಚಾರ ಗಿಟ್ಟಿಸಿಕೊಳ್ಳಲು ಈರೀತಿ ಯತ್ನಿಸುತ್ತಿದ್ದರೋ? ಅಥವಾ ಸಿಎಂ ಕುರ್ಚಿಗೆ ಟವೆಲ್ ಹಾಕಲು ಈ ರೀತಿ ಯತ್ನಿಸುತ್ತಿದ್ದರೋ ಗೊತ್ತಿಲ್ಲ. ಇಂದು ಪ್ರಿಯಾಂಕ್ ಖರ್ಗೆ ಏಕಾಂಗಿಯಾಗಿದ್ದಾರೆ ಎಂದರು.
ನವೆಂಬರ್ 2ರಂದು ಕಲಬುರಗಿಯ ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚಲನ ನಡೆಯಲಿದೆ. ಅನೇಕ ಅಗ್ನಿಪರೀಕ್ಷೆಗಳನ್ನು ಎದುರಿಸಿ ಆರ್.ಎಸ್.ಎಸ್ ಮುಂದೆ ಸಾಗಿದೆ ಎಂದು ಹೇಳಿದರು.