ವಿಜಯಪುರ: ಮನೆಯ ಮುಂದೆ ಆಟವಾಡುತ್ತಿದ್ದ ಮಗು ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ಪಟ್ಟಣದಲ್ಲಿ ನಡೆದಿದೆ.
ಮೂರು ವರ್ಷದ ಹರ್ಷಿತ್ ಮೃತ ಬಾಲಕ. ನಿನ್ನೆಯಿಂದ ಮಗು ಮನೆಯಿಂದ ನಾಪತ್ತೆಯಾಗಿತ್ತು. ಪೋಷಕರು ಕಂಗಾಲಾಗಿ ಹುಡುಕಾಟ ನಡೆಸಿದರೂ ಮಗುವಿನ ಸುಳಿವಿರಲಿಲ್ಲ. ಇಂದು ಅನುಮಾನಗೊಂಡು ಬಾವಿಯಲ್ಲಿ ಪರಿಶೀಲನೆ ನಡೆಸಿದಾಗ ಮಗು ಶವವಾಗಿ ಪತ್ತೆಯಾಗಿದೆ.
ತೆರೆದ ಬಾವಿ ಇದಾಗಿದ್ದು, ಬಾವಿ ಆಸುಪಾಸಿನಲ್ಲಿ ಮಗು ಆಟವಾಡಲು ಹೋಗಿ ಬಾವಿಗೆ ಬಿದ್ದು ಸಾವನ್ನಪ್ಪಿದೆ. ಮುದ್ದೆಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.