ಬಾಗಲಕೋಟೆ: 55 ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ಬಿಜೆಪಿ ತಯಾರಿಸಿದೆ. ನೀವು ಬಿಜೆಪಿಗೆ ಸೇರದಿದ್ದರೆ ಇಡಿ, ಸಿಬಿಐ ದಾಳಿ ನಡೆಸುವುದಾಗಿ ಬಿಜೆಪಿಗರು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಾನಂದ ಕಾಶಪ್ಪನವರ್, ಬಿಜೆಪಿಗರ ಪಟ್ಟಿಯಲ್ಲಿ ನಾನೂ ಇರಬಹುದು. ನಮ್ಮ ಶಾಸಕರಿಗೆ ಬಿಜೆಪಿ ಏಜೆಂಟ್ ಗಳು ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿ ಸೇರದಿದ್ದರೆ ದಾಳಿ ಮಾಡಿಸ್ತೀವಿ. ನಾನು ಇಂತಹ ಯಾವುದೇ ಬೆದರಿಕೆಗಳಿಗೂ ಹೆದರಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರ ಮನೆಗಳಿಗೆ ಬಿಇಜೆಪಿ ಏಜೆಂಟ್ ಗಳನ್ನು ಕಳುಹಿಸಲಾಗುತ್ತಿದೆ. ನಮ್ಮ ಶಾಸಕರಿಗೆ ಅವರು ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿಯ ಯಾವ ಬೆದರಿಕೆಗಳಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.