ವಿಜಯ್ ಮಲ್ಯ, ನೀರವ್ ಮೋದಿ ಸೇರಿದಂತೆ ಹಲವರನ್ನು ಭಾರತಕ್ಕೆ ಕರೆತರಲು ಸಿದ್ಧತೆ : ಯುಕೆಗೆ ತೆರಳಲಿರುವ ಇಡಿ, CBI, NIA ತಂಡ

‌ನವದೆಹಲಿ :  ನಿರವ್ ಮೋದಿ, ವಿಜಯ್ ಮಲ್ಯ ಸೇರಿದಂತೆ ಭಾರತದ ಅನೇಕ ವಾಂಟೆಡ್ ದೇಶಭ್ರಷ್ಟರನ್ನು ಶೀಘ್ರದಲ್ಲೇ ಮರಳಿ ತರಲು ಭಾರತ ಸರ್ಕಾರ ಬಿಗ್‌ ಪ್ಲ್ಯಾನ್‌ ರೂಪಿಸಿದೆ.

 ಮೂಲಗಳ ಪ್ರಕಾರ, ನಿರವ್‌ ಮೋದಿ, ವಿಜಯ್‌ ಮಲ್ಯ ಸೇರಿದಂತೆ ಹಲವರ ಹಸ್ತಾಂತರ ಕ್ರಮವನ್ನು ತ್ವರಿತಗೊಳಿಸಲು ಕೇಂದ್ರ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳ ಉನ್ನತ ಮಟ್ಟದ ತಂಡ ಶೀಘ್ರದಲ್ಲೇ ಯುಕೆ (ಯುನೈಟೆಡ್ ಕಿಂಗ್ಡಮ್) ಗೆ ತೆರಳಲಿದೆ.

ಇಲ್ಲಿಯವರೆಗೆ ಪಡೆದ ಮಾಹಿತಿಯ ಪ್ರಕಾರ, ಭಾರತದ ವಾಂಟೆಡ್ ದೇಶಭ್ರಷ್ಟರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರ ತೀವ್ರ ಪ್ರಯತ್ನಗಳನ್ನು ಮಾಡಲಿದೆ. ಈ ನಿಟ್ಟಿನಲ್ಲಿ, ಪ್ರಮುಖ ಕೇಂದ್ರ ಏಜೆನ್ಸಿಗಳನ್ನು ಯುನೈಟೆಡ್ ಕಿಂಗ್ಡಮ್ಗೆ ಕಳುಹಿಸಲಾಗುತ್ತಿದೆ. ರಕ್ಷಣಾ ಡೀಲರ್ ಸಂಜಯ್ ಭಂಡಾರಿ, ವಜ್ರದ ವ್ಯಾಪಾರಿ ನೀರವ್ ಮೋದಿ, ಕಿಂಗ್ಫಿಶರ್ ಏರ್ಲೈನ್ಸ್ ಪ್ರವರ್ತಕ ವಿಜಯ್ ಮಲ್ಯ ಸೇರಿದಂತೆ ಭಾರತದಿಂದ ಪಲಾಯನ ಮಾಡಿದ ಅನೇಕರು ಯುಕೆಯಲ್ಲಿ ವಾಸಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read