Caught on Cam | ವೇದಿಕೆ ಮೇಲಿದ್ದ ನಟ ವಿಜಯ್ ದೇವರಕೊಂಡರತ್ತ ಏಕಾಏಕಿ ನುಗ್ಗಿದ ಅಭಿಮಾನಿ; ಸ್ಟೇಜ್ ಮೇಲಿದ್ದವರಿಗೆಲ್ಲಾ ʼಶಾಕ್ʼ

ನಟ ವಿಜಯ್ ದೇವರಕೊಂಡ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಅಭಿಮಾನಿಯೊಬ್ಬ ಏಕಾಏಕಿ ವೇದಿಕೆಗೆ ನುಗ್ಗಿ ಬಂದ ಅನಿರೀಕ್ಷಿತ ಘಟನೆ ನಡೆದಿದೆ. ಭದ್ರತೆಯನ್ನು ಉಲ್ಲಂಘಿಸಿ ವೇದಿಕೆಯ ಮೇಲೆ ವಿಜಯ್ ದೇವರಕೊಂಡ ಪಾದ ಸ್ಪರ್ಶಿಸಲು ಅಭಿಮಾನಿ ನುಗ್ಗಿ ಬಂದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಮುಖ್ಯ ಭೂಮಿಕೆಯಲ್ಲಿರುವ ‘ಬೇಬಿ’ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಜಯ್ ದೇವರಕೊಂಡ ಬಂದಿದ್ದರು. ಅವರು ಭಾಷಣ ಮಾಡಲು ಮುಂದಾಗುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳಲ್ಲಿ ಒಬ್ಬರು ವೇದಿಕೆಗೆ ಜಿಗಿದು ಅಚ್ಚರಿ ಮೂಡಿಸಿದರು.

ವಿಜಯ್ ದೇವರಕೊಂಡ ಅಭಿಮಾನಿ ವರ್ತನೆಯಿಂದ ಗಾಬರಿಗೊಂಡು ಅವರಿಂದ ತಪ್ಪಿಸಿಕೊಳ್ಳಲು ಹಿಂದೆ ಸರಿದರು. ತಕ್ಷಣ ಸೆಕ್ಯುರಿಟಿ ಗಾರ್ಡ್ಸ್ ಅಭಿಮಾನಿಯನ್ನು ಹಿಡಿದು ಕರೆದೊಯ್ದರು. ಆದರೆ ಅಭಿಮಾನಿಯನ್ನ ಹೊರಗೆ ಕಳಿಸುವ ಮೊದಲು ಆತನೊಂದಿಗೆ ವಿಜಯ್ ದೇವರಕೊಂಡ ಫೋಟೋಗೆ ಪೋಸ್ ನೀಡಿ ಕಳಿಸಿಕೊಟ್ಟರು. ನಟನ ಈ ನಡೆಯನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಸಕ್ಸಸ್ ಮೀಟ್ ನಲ್ಲಿ ಹೊಸ ಕಲಾವಿದರಿಗೆ ಶುಭ ಕೋರಿದ ವಿಜಯ್ ದೇವರಕೊಂಡ ಕಿವಿಮಾತು ಹೇಳಿದರು. ಸಾಯಿ ರಾಜೇಶ್ ನೀಲಂ ನಿರ್ದೇಶನದ ಬೇಬಿ ಸಿನಿಮಾದಲ್ಲಿ ಆನಂದ್ ದೇವರಕೊಂಡ ಜೊತೆಗೆ ವೈಷ್ಣವಿ ಚೈತನ್ಯ, ವಿರಾಜ್ ಅಶ್ವಿನ್, ನಾಗೇಂದ್ರ ಬಾಬು ಮತ್ತು ಹರ್ಷ ಚೆಮುಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read