ವಿದ್ಯಾಬಾಲನ್ ಗೆ ಮಗಳಿದ್ದಾಳಾ ಎಂಬ ಗಾಸಿಪ್‌ ಗೆ ನಟಿ ಸ್ಪಷ್ಟನೆ

ತಮ್ಮ ಖಾಸಗಿ ಜೀವನದ ಬಗ್ಗೆ ಸೆಲೆಬ್ರಿಟಿಗಳ ಸುದ್ದಿ ಯಾವಾಗಲೂ ಹಾಟ್ ಟಾಪಿಕ್ ಆಗಿರುತ್ತದೆ. ಸೆಲೆಬ್ರಿಟಿಗಳ ಖಾಸಗಿ ಜೀವನದ ಬಗ್ಗೆ ತಿಳಿಯಲು ಅವರ ಅಭಿಮಾನಿಗಳು ಸೇರಿದಂತೆ ಜನಸಾಮಾನ್ಯರು ಸಾಕಷ್ಟು ಕುತೂಹಲ ಹೊಂದಿರುತ್ತಾರೆ.

ಇತ್ತೀಚಿಗೆ ನಟಿ ವಿದ್ಯಾ ಬಾಲನ್ ಪುಟ್ಟ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದರು. ಆ ವಿಡಿಯೋದಲ್ಲಿ ಅವರಿಬ್ಬರ ನಡುವೆ ಅತ್ಯಂತ ಆತ್ಮೀಯತೆ ಕಂಡುಬಂದಿತ್ತು. ಇದನ್ನು ನೋಡಿದ ಹಲವರು ವಿದ್ಯಾಬಾಲನ್ ಸೀಕ್ರೆಟ್ ಆಗಿ ಮಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದ ಕಾಲದಲ್ಲೂ ತಮಗೆ ಮಗಳಿರುವುದನ್ನು ವಿದ್ಯಾಬಾಲನ್ ರಹಸ್ಯವಾಗಿಟ್ಟಿದ್ದಾರೆಂದು ಹಲವರು ನಟಿಯನ್ನು ಶ್ಲಾಘಿಸಿದ್ದರು.

ಮತ್ತಷ್ಟು ಮಂದಿ ವಿಮಾನ ನಿಲ್ದಾಣದಲ್ಲಿ ಪುಟ್ಟ ಹುಡುಗಿಯೊಂದಿಗೆ ವಿದ್ಯಾ ಬಾಲನ್ ಇರುವುದನ್ನು ತೋರಿಸುವ ವೈರಲ್ ವೀಡಿಯೊ ನೋಡಿ ವಿದ್ಯಾಬಾಲನ್ ಜೊತೆಗಿದ್ದ ಬಾಲಕಿ ಯಾರು? ನಟಿಯ ಮಗಳಾ ಎಂದು ತಲೆ ಕೆಡಿಸಿಕೊಂಡು ಹುಡುಕಾಡಿದ್ದರು. ಈ ವಿಡಿಯೋ ವ್ಯಾಪಕವಾಗಿ ಗಮನ ಸೆಳೆದ ನಂತರ ವಿದ್ಯಾ ಬಾಲನ್ ಅಂತಿಮವಾಗಿ ವದಂತಿಗಳಿಗೆ ಸ್ಪಷ್ಟನೆ ನೀಡಿ ಕ್ಲಿಪ್‌ನಲ್ಲಿರುವ ಹುಡುಗಿ ತನ್ನ ಮಗಳಲ್ಲ ಎಂದಿದ್ದಾರೆ.

ವಿಡಿಯೋದಲ್ಲಿರುವ ಹುಡುಗಿ ತನ್ನ ಸಹೋದರಿಯ ಮಗಳು ಎಂದಿರುವ ನಟಿ, “ಅದು ನನ್ನ ತಂಗಿಯ ಮಗಳು ಇರಾ ! ಆಕೆಗೆ ಅವಳಿ ಮಕ್ಕಳಿದ್ದಾರೆ: ಹುಡುಗ ರುಹಾನ್ ಮತ್ತು ಇರಾ ಎಂದಿದ್ದಾರೆ. ಇರಾ, ವಿದ್ಯಾಬಾಲನ್ ಅವರ ಜೈವಿಕ ಮಗಳು ಅಲ್ಲದಿದ್ದರೂ ಸಹ ಇಬ್ಬರ ನಡುವೆ ಬಿಗಿಯಾದ ಬಂಧವಿದೆಯಂತೆ. ತನ್ನ ತಂಗಿಯ ಮಕ್ಕಳ ಮೇಲಿನ ಪ್ರೀತಿಯನ್ನು ವಿದ್ಯಾ ಬಾಲನ್ ವ್ಯಕ್ತಪಡಿಸಿದ್ದಾರೆ. 2012 ರಲ್ಲಿ ನಟಿ ವಿದ್ಯಾ ಬಾಲನ್ ನಿರ್ಮಾಪಕ ಸಿದ್ದಾರ್ಥ್ ರಾಯ್ ಕಪೂರ್ ಅವರನ್ನು ವಿವಾಹವಾಗಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read