‘ಬಿಗ್ ಬಿ’ ಗೆ ನಾಲ್ಕೂವರೆ ಕೋಟಿ ರೂ. ಮೌಲ್ಯದ ಕಾರ್ ಗಿಫ್ಟ್; ವಿಷಯ ತಿಳಿದು ಕೆನ್ನೆಗೆ ಬಾರಿಸಿದ್ರಂತೆ ನಿರ್ಮಾಪಕನ ತಾಯಿ….!

ಚಲನಚಿತ್ರ ನಿರ್ಮಾಪಕ ವಿಧು ವಿನೋದ್ ಚೋಪ್ರಾ, ಬಿಗ್ ಬಿ ಅಮಿತಾಬ್‌ ಬಚ್ಚನ್‌ ಗೆ ಸಂಬಂಧಿಸಿದ ವಿಷ್ಯವೊಂದನ್ನು ಹಂಚಿಕೊಂಡಿದ್ದಾರೆ. ವಿಧು ವಿನೋದ್ ಚೋಪ್ರಾ ಒಮ್ಮೆ ನಟ ಅಮಿತಾಬ್ ಬಚ್ಚನ್‌ಗೆ 4 ಕೋಟಿ ಮೌಲ್ಯದ ಐಷಾರಾಮಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ವಿಷ್ಯ ತಿಳಿದ ಅವರ ತಾಯಿ ಕಪಾಳಮೋಕ್ಷ ಮಾಡಿದ್ದಲ್ಲದೆ ಮೂರ್ಖ ಎಂದು ಕರೆದಿದ್ದರು.

2007 ರ ಚಲನಚಿತ್ರ ವಿಧು ವಿನೋದ್‌ ಚೋಪ್ರಾ ಚಿತ್ರ ಏಕಲವ್ಯದಲ್ಲಿ ಅಮಿತಾಬ್‌ ಬಚ್ಚನ ಕಾಣಿಸಿಕೊಂಡಿದ್ದರು. ಈ ವೇಳೆ ವಿಧು ವಿನೋದ್‌ ಚೋಪ್ರಾ, ಅಮಿತಾಬ್‌ ಬಚ್ಚನ್‌ ಅವರಿಗೆ ಉಡುಗೊರೆಯಾಗಿ ಈ ಕಾರನ್ನು ನೀಡಿದ್ದರು.  ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯವನ್ನು ಬರೆದ ವಿಧು ವಿನೋದ್‌, ನಾನು ಅಮಿತಾಬ್‌ಗೆ ಕಾರನ್ನು ಉಡುಗೊರೆಯಾಗಿ ನೀಡುವಾಗ ನನ್ನ ತಾಯಿಯನ್ನು ನನ್ನೊಂದಿಗೆ ಕರೆದೊಯ್ದಿದ್ದೇನೆ. ಅವರು, ಅಮಿತಾಬ್‌ ಗೆ ಕೀ ಕೊಟ್ಟರು. ಅವರು ಹಿಂತಿರುಗಿ ಬಂದು ನೀಲಿ ಬಣ್ಣದ ನನ್ನ ಕಾರಿನಲ್ಲಿ ಕುಳಿತರು. ಮಾರುತಿ ವ್ಯಾನ್‌ಗೆ ಆ ಸಮಯದಲ್ಲಿ ಡ್ರೈವರ್ ಇರಲಿಲ್ಲ. ನಾನೇ ಗಾಡಿ ಓಡಿಸ್ತಿದ್ದ ವೇಳೆ, ನೀನು ಲಂಬೂಗೆ ಕಾರ್‌ ನೀಡಿದ್ಯಾ ಅಂತ ಅಮ್ಮ ಕೇಳಿದ್ದರು. ನಾನು ಹೌದು ಎಂದಾಗ, ನೀನೇಕೆ ಖರೀದಿ ಮಾಡೋದಿಲ್ಲ ಎಂದರು.  ಸಮಯ ಬಂದಾಗ ನಾನು ಖರೀದಿ ಮಾಡ್ತೇನೆ ಎಂದಿದ್ದೆ. ನಂತ್ರ ಅಮ್ಮ, ಕಾರಿಗೆ 11 ಲಕ್ಷ ರೂಪಾಯಿ ಆಗಿರಬಹುದಾ ಎಂದ್ರು. ನಾನದಕ್ಕೆ ಇಲ್ಲ 4.5 ಕೋಟಿ ರೂಪಾಯಿ ಎಂದು ನಕ್ಕಿದ್ದೆ. ಈ ವೇಳೆ ನನ್ನ ಅಮ್ಮ ಕಪಾಳಮೋಕ್ಷ ಮಾಡಿ, ನನ್ನನ್ನು ಮೂರ್ಖ ಎಂದಿದ್ದರು ಎಂದು ಬರೆದಿದ್ದಾರೆ.

ಹಣವು ನಿಮಗೆ ಸಂತೋಷವನ್ನು ನೀಡಲು ಸಾಧ್ಯವಾಗದಿದ್ದರೆ  ಅದಕ್ಕೇನು ಅರ್ಥ ಎಂದು ವಿಧು ವಿನೋದ್‌ ಚೋಪ್ರಾ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಈ ನಿರ್ಮಾಪಕ ಸ್ವತಃ 2 ಲಕ್ಷ ರೂಪಾಯಿಯ ಕಾರನ್ನು ಓಡಿಸುತ್ತಿದ್ದರು, 4 ಕೋಟಿ ರೂಪಾಯಿ ಮೌಲ್ಯದ ಕಾರನ್ನು ಅಮಿತಾಬ್‌ಗೆ ಉಡುಗೊರೆಯಾಗಿ ನೀಡಿದ್ದರು. ಇದನ್ನು ತಿಳಿದ ತಾಯಿಗೆ ಕೋಪ ಬಂದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read