ಸದನದಲ್ಲಿ ಅಹೋರಾತ್ರಿ ಧರಣಿ: ಸರ್ಕಾರದ ವಿರುದ್ಧ ತಾಳ ಹಿಡಿದು ಭಜನೆ ಮಾಡಿದ ವಿಪಕ್ಷ ಸದಸ್ಯರು; ವಿಧಾನಸೌಧದಲ್ಲೇ ವಾಕಿಂಗ್, ಯೋಗ

ಬೆಂಗಳೂರು: ಮುಡಾ ಅಕ್ರಮ ಪ್ರಕರಣದ ಚರ್ಚೆಗೆ ಅವಕಾಶ ನೀಡದಿರುವುದನ್ನು ಖಂಡಿಸಿ ಬಿಜೆಪಿ ಹಗೂ ಜೆಡಿಎಸ್ ಸದಸ್ಯರು ಸದನದಲ್ಲಿಯೇ ಅಹೋರಾತ್ರಿ ಧರಣಿ ನಡೆಸಿದ್ದಾರೆ.

ವಿಪಕ್ಷ ನಾಯಕ ಆರ್.ಅಶೋಕ್, ಬಿ.ವೈ.ವಿಜಯೇಂದ್ರ, ಅಶ್ವತ್ಥನಾರಾಯಣ, ಶರವಣ, ಪ್ರಭು ಚೌವ್ಹಾಣ್, ಸಿ.ಟಿ.ರವಿ, ರವಿ ಕುಮಾರ್ ಸೇರಿದಂತೆ ಬಿಜೆಪಿ ಶಾಸಕರು, ಸದಸ್ಯರು ಸದನದಲ್ಲಿ ತಾಳ ಹಿಡಿದು ಭಜನೆ, ಹಾಡು ಹಾಡುತ್ತಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾತ್ರಿ ವಿಧಾನಸೌಧದ ಒಳಗೆ ಮಲಗಿದ ಬಿಜೆಪಿ-ಜೆಡಿಎಸ್ ಸದಸ್ಯರು ಬೆಳಿಗ್ಗೆ ಎದ್ದು ವಿಧಾನಸೌಧದ ಆವರಣದಲ್ಲಿ ವಾಕಿಂಗ್, ಯೋಗಾಸನ ಮಾಡಿ ಗಮನ ಸೆಳೆದರು. ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read