ಜಲ್ಲಿಕಟ್ಟು ಗೂಳಿಗೆ ಬಲವಂತವಾಗಿ ಹುಂಜ ತಿನ್ನಿಸಿದ ವಿಡಿಯೋ ವೈರಲ್: ಆಕ್ರೋಶ

ಸೇಲಂ: ತನ್ನ ಜಲ್ಲಿಕಟ್ಟು ಗೂಳಿಗೆ ಹುಂಜವನ್ನು ಬಲವಂತವಾಗಿ ತಿನ್ನಿಸುತ್ತಿರುವ ವಿಡಿಯೋವನ್ನು ಶೇರ್ ಮಾಡಿದ ಯೂಟ್ಯೂಬರ್ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿಯಲ್ಲಿ ಘಟನೆ ನಡೆದಿದೆ. ಹುಂಜವನ್ನು ಅಗಿಯಲು ಗೂಳಿಗೆ ಬಲವಂತ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಯೂಟ್ಯೂಬರ್ ರಘು ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಲಾದ 2.48 ನಿಮಿಷಗಳ ವಿಡಿಯೋದಲ್ಲಿ, ಮೂವರು ವ್ಯಕ್ತಿಗಳು ಗೂಳಿಯನ್ನು ಬಲವಂತದಿಂದ ಹಿಡಿದು ಇನ್ನೊಬ್ಬ ವ್ಯಕ್ತಿ ಹಸಿ ಮಾಂಸವನ್ನು ನೀಡಿ ನಂತರ ಕೋಳಿಯನ್ನು ಗೂಳಿಯ ಬಾಯಿಗೆ ಸೇರಿಸುತ್ತಾನೆ.

ಪ್ರಾಣಿ ಕಲ್ಯಾಣ ಸಂಸ್ಥೆ ದೂರು

ಪೀಪಲ್ ಫಾರ್ ಕ್ಯಾಟಲ್ ಏಮ್ ಇಂಡಿಯಾ(ಪಿಎಫ್‌ಸಿಐ) ಸಂಸ್ಥಾಪಕ ಅರುಣ್ ಪ್ರಸನ್ನ ಅವರ ದೂರಿನ ಮೇರೆಗೆ ಸೇಲಂ ಜಿಲ್ಲಾ ಪೊಲೀಸರು ಪ್ರಾಣಿ ಹಿಂಸೆ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅನ್ವಯ ಕೇಸ್ ದಾಖಲಿಸಿಕೊಂಡಿದ್ದಾರೆ.

ತಾರಮಂಗಲಂ ಪೊಲೀಸ್ ಇನ್ಸ್‌ಪೆಕ್ಟರ್  ಮಾಹಿತಿ ನೀಡಿ, “ನಾವು ಎಫ್‌ಐಆರ್ ದಾಖಲಿಸಿದ್ದೇವೆ. ನಾವು ತನಿಖೆ ನಡೆಸುತ್ತಿದ್ದೇವೆ. ನಾವು ಇನ್ನೂ ಯಾರನ್ನೂ ಬಂಧಿಸಿಲ್ಲ” ಎಂದು ಹೇಳಿದ್ದಾರೆ.

ಜಲ್ಲಿಕಟ್ಟು, ಗೂಳಿ ಪಳಗಿಸುವ ಉತ್ಸವದಲ್ಲಿ ಗೂಳಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೋಳಿ ಆಹಾರ ನೀಡಲಾಗುತ್ತದೆ. ಅಲ್ಲಿ ಗೆದ್ದ ಗೂಳಿಗಳು ಮತ್ತು ಅವುಗಳ ಮಾಲೀಕರು ಚಿನ್ನದ ನಾಣ್ಯಗಳು ಸೇರಿದಂತೆ ಬಹುಮಾನಗಳನ್ನು ಪಡೆಯುತ್ತಾರೆ.

ದೂರುದಾರರಾದ ಅರುಣ್, ಇದು ಜೀವಂತ ಹುಂಜ ಮತ್ತು ಗೂಳಿ ಎರಡಕ್ಕೂ ತೀವ್ರವಾದ ಕ್ರೌರ್ಯವನ್ನು ಒಳಗೊಂಡಿರುತ್ತದೆ. ಗೂಳಿಯು ಸಸ್ಯಾಹಾರಿ ಪ್ರಾಣಿಯಾಗಿದ್ದು, ಕೋಳಿ ತಿನ್ನಲು ಒತ್ತಾಯಿಸುವುದು ಕಲ್ಪನೆಗೂ ಮೀರಿದೆ. ನನ್ನ ಏಕೈಕ ಭಯವೆಂದರೆ ಈ ಗೂಳಿ ಗೆದ್ದರೆ, ಅನೇಕ ಗೂಳಿ ಮಾಲೀಕರು ಇದನ್ನು ಅನುಸರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

https://www.instagram.com/p/C1_P-IDprCm/?utm_source=ig_embed&utm_campaign=loading

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read