Video: ಚುಡಾಯಿಸಿದ ʼರೋಡ್‌ ರೋಮಿಯೋʼ ಗಳಿಗೆ ಯುವತಿಯಿಂದ ಗೂಸಾ

ಯುವತಿಯೊಬ್ಬಳು ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮೂವರು ಯುವಕರನ್ನು ಥಳಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಉತ್ತರ ಪ್ರದೇಶದ ಮೊರಾದಾಬಾದ್‌ನ ಕಾಂತ್ ನಗರದಲ್ಲಿ ಈ ಘಟನೆ ನಡೆದಿದ್ದು, ಯುವತಿ ಕೆಲವು ವಸ್ತುಗಳನ್ನು ಖರೀದಿಸಲು ತನ್ನ ಸೋದರ ಸಂಬಂಧಿಯೊಂದಿಗೆ ಮಾರುಕಟ್ಟೆಗೆ ಹೋಗುತ್ತಿದ್ದರು.

ಯುವತಿ ಮತ್ತಾಕೆಯ ಸೋದರ ಸಂಬಂಧಿ ಕುಮಾರ್ ಪೆಟ್ರೋಲ್ ಪಂಪ್ ಬಳಿ ಬರುತ್ತಿದ್ದಂತೆ ಮೂವರು ಯುವಕರು ಚುಡಾಯಿಸಲು ಆರಂಭಿಸಿದ್ದಲ್ಲದೇ ಅಶ್ಲೀಲ ಕಾಮೆಂಟ್ ಗಳನ್ನು ಮಾಡಿದ್ದಾರೆ. ಇವರ ವರ್ತನೆಯಿಂದ ಕುಪಿತಳಾದ ಯುವತಿ ಕೂಡಲೇ ಬೈಕ್‌ನಿಂದ ಇಳಿದು ಕಿರುಕುಳ ನೀಡಿದ ಮೂವರನ್ನು ಹಿಡಿದು ರಸ್ತೆಯಲ್ಲೇ ಥಳಿಸಿದ್ದಾರೆ.

ಮಾರಾಮಾರಿಯಲ್ಲಿ ಆರೋಪಿಗಳು ಸಹ ಪ್ರತಿ ಹಲ್ಲೆ ಮಾಡಿದ್ದರಿಂದ ಯುವತಿಗೆ ಗಾಯಗಳಾಗಿವೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ದೂರು ದಾಖಲಿಸಿದ ನಂತರ, ಪೊಲೀಸರು ಮಹಿಳೆಯು CHC (ಸಮುದಾಯ ಆರೋಗ್ಯ ಕೇಂದ್ರ) ದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಅನೇಕ ಬಳಕೆದಾರರು ಕಿರುಕುಳ ನೀಡುವವರ ವಿರುದ್ಧ ಯುವತಿ ತೋರಿದ ಧೈರ್ಯವನ್ನು ಶ್ಲಾಘಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read