ವಿಶ್ವಕಪ್ ನಂತ್ರ ಲಂಡನ್ ನಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ;‌ ವಿಡಿಯೋ ವೈರಲ್

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವಕಪ್‌ ನಲ್ಲಿ ಅಬ್ಬರಿಸಿದ್ದಾರೆ. ಫೈನಲ್‌ ಪಂದ್ಯದವರೆಗೂ ಉತ್ತಮ ಪ್ರದರ್ಶನ ನೀಡಿದ್ದ ಕೊಹ್ಲಿ, ಎಲ್ಲರ ಮೆಚ್ಚುಗೆ ಗಳಿಸಿದ್ರು. ಕೊಹ್ಲಿ ಅದ್ಭುತ ಆಟದ ಮಧ್ಯೆಯೂ ಭಾರತ ವಿಶ್ವಕಪ್‌ ಎತ್ತಿ ಹಿಡಿಯಲು ಸಾಧ್ಯವಾಗ್ಲಿಲ್ಲ. ಈ ಸೋಲು ಎಲ್ಲರ ನೋವಿಗೆ ಕಾರಣವಾಗಿದೆ. ಕೊಹ್ಲಿ ಕೂಡ ಸೋಲಿನ ನೋವು ಮರೆಯಲು ಮುಂದಾಗಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಜೊತೆ ಲಂಡನ್ ತಲುಪಿದ್ದಾರೆ.

ವಿಶ್ವಕಪ್‌ ನಂತ್ರ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿವ ಪಂದ್ಯದಲ್ಲಿ ಕೊಹ್ಲಿ ಆಡ್ತಿಲ್ಲ. ವಿಶ್ರಾಂತಿಯಲ್ಲಿರುವ ಕೊಹ್ಲಿ ಲಂಡನ್‌ ನಲ್ಲಿ ರಜಾ ದಿನ ಕಳೆಯುತ್ತಿದ್ದಾರೆ. ಕೊಹ್ಲಿ ಜೊತೆ ಅನುಷ್ಕಾ ಅಲ್ಲದೆ ಮಗಳು ವಾಮಿಕಾ ಇದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋ ವೈರಲ್‌ ಆಗಿದೆ. ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ  ವಿಡಿಯೋದಲ್ಲಿ ಕೊಹ್ಲಿ, ಅನುಷ್ಕಾ ಹಾಗೂ ವಾಮಿಕಾ ಮಸುಕಾಗಿ ಕಾಣ್ತಿದ್ದಾರೆ.

ವಿರಾಟ್ ಕೊಹ್ಲಿ ವಿಶ್ವಕಪ್ 2023 ರಲ್ಲಿ 11 ಪಂದ್ಯಗಳಲ್ಲಿ 765 ರನ್ ಗಳಿಸಿದ್ದರು. ಇದರಲ್ಲಿ ಮೂರು ಶತಕಗಳು ಮತ್ತು ಆರು ಅರ್ಧ ಶತಕಗಳು ಸೇರಿವೆ. ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಶತಕಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

https://twitter.com/SACHINSP231090/status/1730109322179551611?ref_src=twsrc%5Etfw%7Ctwcamp%5Etweetembed%7Ctwterm%5E1730109322179551611%7Ctwgr%5Ecd55fe86fab138bf49acc65788d5bef562e46447%7Ctwcon%5Es1_&ref_url=https%3A%2F%2Fhindi.news18.com%2Fcricket%2Fwatch-video-virat-kohli-visited-london-with-anushka-sharma-and-daughter-vamika-after-loss-in-world-cup-2023-final-against-australia-7865183.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read