Video: ನಕಲಿ ‘ಪನೀರ್’ ತಯಾರಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ…..!

ಮಾರುಕಟ್ಟೆಯಲ್ಲಿ ಪನೀರ್ ಬೆಲೆ ಹೆಚ್ಚಾಗಿದ್ದರೂ, ಪನೀರ್ ಬಳಸಿ ಮಾಡುವ ತಿಂಡಿ ರಸ್ತೆ ಬದಿಯಲ್ಲಿ ಕಡಿಮೆ ಬೆಲೆಗೆ ಹೇಗೆ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಇದಕ್ಕೆ ಲಕ್ಷ್ಯ ಯಾದವ್ ಎಂಬುವವರು ಉತ್ತರ ನೀಡಿದ್ದಾರೆ. ನಕಲಿ ಪನೀರ್ ಹೇಗೆ ತಯಾರಾತ್ತದೆ ಎಂಬುದನ್ನ ಅವರು ವಿವರಿಸಿದ್ದಾರೆ.

200-ಗ್ರಾಂ ಪ್ಯಾಕೆಟ್‌ನ ಅಮುಲ್‌ನ ಮಲೈ ಪನೀರ್ ಬೆಲೆ, ಬಿಗ್ ಬಾಸ್ಕೆಟ್‌ನಲ್ಲಿ ರೂ 77.5 ಮತ್ತು ಬ್ಲಿಂಕಿಟ್‌ನಲ್ಲಿ 91 ರೂ.ಇದೆ. ಮದರ್ ಡೈರಿ ಪನೀರ್‌ನ 200-ಗ್ರಾಂ ಪ್ಯಾಕೆಟ್ 91 ರೂ. ಗೆ ಸಿಗುತ್ತದೆ. ಕೆಲವೊಮ್ಮೆ ಈ ಬೆಲೆ ವ್ಯತ್ಯಾಸವಾಗಬಹುದು. ಆದರೆ ಬೀದಿ ವ್ಯಾಪಾರಿಗಳು 300 ಗ್ರಾಂನಷ್ಟು ಪನೀರ್ ಬಳಸಿದ್ರೂ ಅವರು ತಯಾರಿಸುವ ತಿಂಡಿಯನ್ನು ಕೇವಲ 30 ರಿಂದ 50 ರೂ. ಗೆ ಹೇಗೆ ನೀಡುತ್ತಾರೆ?

ಇದು ಉತ್ತಮ ಪನೀರ್ ಆಗಿರುವುದಿಲ್ಲ. ಹಾಲಿನ ಪುಡಿ, ತಾಳೆ ಎಣ್ಣೆ ಮತ್ತು ಸುಣ್ಣದಿಂದ ಮಾಡಿದ ‘ನಕಲಿ’ ಪನೀರ್. ಇದನ್ನು ಲಕ್ಷ್ಯ ಯಾದವ್ ವಿವರಿಸಿದ್ದಾರೆ.

ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ, ಕೆಲವು ದಿನದ ಹಿಂದೆ ನಾನು ದೆಹಲಿಯ ತಿಲಕ್ ನಗರ್ ಮಾರ್ಕೆಟ್ ಗೆ ಹೋಗಿದ್ದೆ. ಅಲ್ಲಿನ ಅಂಗಡಿಯೊಂದರಲ್ಲಿ ಪನೀರ್ ನ ಪಕೋಡ ಮಾಡುತ್ತಿದ್ದರು. ಆಗ ನಾನು ಅವರಿಗೆ ಬ್ರೆಡ್, ಆಲೂಗಡ್ಡೆ, ಮಸಾಲಾ ಮತ್ತು ಪನೀರ್ ಬಳಸಿ ಒಂದು ಪ್ಲೇಟ್‌ಗೆ ಕೇವಲ 40 ರೂ.ಗಳನ್ನು ಹೇಗೆ ವಿಧಿಸುತ್ತೀರಿ ಎಂದು ಮಾರಾಟಗಾರನನ್ನು ಕೇಳಿದಾಗ, ಅವರು ಪನ್ನೀರ್ ಡಿಸ್ಬ್ರಿಬ್ಯೂಟರ್ ಕಡೆ ತಿರುಗಿದರು. ಪನೀರ್ ವಿತರಕನ ಮುಖದಲ್ಲಿ ಭಯ ಕಾಣುತ್ತಿತ್ತು ಎಂದಿದ್ದಾರೆ. ನೀವು ಹೊರಗೆ ತಿನ್ನುವ ಎಲ್ಲಾ ಪನೀರ್ ನಕಲಿ. ಅದು ಹಾಲಿನ ಪುಡಿ, ನೀರು, ತಾಳೆ ಎಣ್ಣೆ ಮತ್ತು ಸುಣ್ಣದಿಂದ ಮಾಡಲ್ಪಟ್ಟಿದೆ ಎಂದಿದ್ದಾರೆ.

ಹಾಲಿನ ಪುಡಿ, ನೀರು, ತಾಳೆಎಣ್ಣೆ ಮತ್ತು ಸುಣ್ಣದಿಂದ ಮಾಡುವ ಪನೀರ್ ರುಚಿ ಚೆನ್ನಾಗಿಯೇ ಇರುತ್ತದೆ. ಆದರೆ ಇದು ಹಾನಿಕಾರಕ ಮತ್ತು ನೀವು ಕೊಡುವ ದುಡ್ಡಿನ ಬೆಲೆಗೆ ಮೌಲ್ಯಯುತವಾದುದಲ್ಲ. ಇನ್ನೂ ಆತಂಕ ವಿಚಾರವೆಂದರೆ ಈ ಪನೀರ್ ಅನ್ನು ಉನ್ನತ ಮಟ್ಟದ ರೆಸ್ಟೋರೆಂಟ್‌ಗಳಿಗೆ ಸಹ ಸರಬರಾಜು ಮಾಡಲಾಗುತ್ತದೆ ಎಂದು ಯಾದವ್ ಹೇಳುತ್ತಾರೆ.

ವೀಡಿಯೊವನ್ನು ಮೇ 14 ರಂದು ಪೋಸ್ಟ್ ಮಾಡಲಾಗಿದ್ದು ಇದುವರೆಗೆ 2 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ. “FSSAI ಈ ಪನೀರ್ ತಯಾರಿಸುವ ವಿತರಕರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರಕ್ಕೆ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದಿದ್ದರೆ ನಾವು ಏಕೆ ತೆರಿಗೆ ಪಾವತಿಸುತ್ತಿದ್ದೇವೆ?” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read