ಬಿಹಾರದ ನಳಂದದಲ್ಲಿ ಬುಧವಾರ ವಿಚಿತ್ರ ಕಳ್ಳತನ ನಡೆದಿದೆ. ಮಹಿಳೆಯೊಬ್ಬಳು ಚಿನ್ನದ ಆಭರಣ ಕೊಳ್ಳುವ ನೆಪದಲ್ಲಿ ಬಾಯಲ್ಲಿ ನುಂಗಿ ಪರಾರಿಯಾಗಲು ಯತ್ನಿಸಿದ್ದಾಳೆ.
ಅಂಗಡಿಯಲ್ಲಿ ಎಲ್ಲರೂ ಕೆಲಸದಲ್ಲಿ ಬ್ಯುಸಿ ಆಗಿದ್ದರು. ಮೂವರು ಅಂಗಡಿಯವರು ಗ್ರಾಹಕರಿಗೆ ಆಭರಣ ತೋರಿಸುತ್ತಿದ್ದರು. ಹೊರಗೆ, ಮಕ್ಕಳು, ಜನರು ಓಡಾಡುತ್ತಿದ್ದರು. ಅಂಗಡಿಯ ಮೂಲೆಯಲ್ಲಿ ಕುಳಿತಿದ್ದ ಮಹಿಳೆ, ಚಿನ್ನದ ತುಣುಕುಗಳನ್ನ ಪರೀಕ್ಷೆ ಮಾಡ್ತಿದ್ದ ಹಾಗೇ ನಿಧಾನವಾಗಿ ಬಾಯಿಗೆ ಹಾಕಿಕೊಳ್ಳುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕೆಂಪು ದುಪಟ್ಟಾದಿಂದ ತಲೆ ಮುಚ್ಚಿಕೊಂಡಿದ್ದ ಮಹಿಳೆ, ತಟ್ಟೆಯಲ್ಲಿದ್ದ ಆಭರಣಗಳನ್ನ ನೋಡ್ತಿದ್ದಳು. ಮೂಗುತಿಗಳನ್ನ ಟ್ರೈ ಮಾಡಿ, ಕ್ಷಣಾರ್ಧದಲ್ಲಿ ಬಾಯಿಗೆ ಹಾಕಿಕೊಳ್ತಿದ್ದಳು. ಅಂಗಡಿಯವನು ಆಭರಣದ ಲೆಕ್ಕ ಹಾಕಿದಾಗ, ತುಣುಕುಗಳು ಮಿಸ್ ಆಗಿದ್ದವು. ಮಹಿಳೆಯನ್ನ ಪ್ರಶ್ನಿಸಿದಾಗ, ಆಕೆ ಇಲ್ಲಾ ಅಂದಳು.
ಅಂಗಡಿಯವನು ಸಿಸಿಟಿವಿ ಚೆಕ್ ಮಾಡಿದಾಗ, ಮಹಿಳೆ ಆಭರಣ ನುಂಗೋದು ಗೊತ್ತಾಯ್ತು. ಮಹಿಳೆಯ ಬಾಯಿ ಚೆಕ್ ಮಾಡಿದಾಗ, ಚಿನ್ನದ ಆಭರಣ ಸಿಕ್ಕಿದವು. ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ರು, ಆದ್ರೆ ಲಿಖಿತ ದೂರು ಮತ್ತು ಸಾಕ್ಷ್ಯಗಳಿಲ್ಲದ ಕಾರಣ ಪೊಲೀಸರು ಆಕೆಯನ್ನ ಬಿಡುಗಡೆ ಮಾಡಿದ್ರು.