ಮೋಜಿಗಾಗಿ ವಾಹನಗಳಿಗೆ ಹಾನಿ; ಮೂವರು ಯುವಕರ ಮೆರವಣಿಗೆ ಮಾಡಿದ ಪೊಲೀಸರು | Video

ಪುಣೆಯ ಬಿಬೆವಾಡಿ ಪ್ರದೇಶದಲ್ಲಿ ಬುಧವಾರ ಮುಂಜಾನೆ ಮೂವರು ಯುವಕರು 25 ವಾಹನಗಳಿಗೆ ಹಾನಿ ಮಾಡಿದ್ದಾರೆ. ಕಾರುಗಳು ಮತ್ತು ಆಟೋರಿಕ್ಷಾಗಳು ಸೇರಿದಂತೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಗುರಿಯಾಗಿಸಿಕೊಂಡು ಹಾನಿ ಎಸಗಿದ್ದಾರೆ.

ಆರೋಪಿಗಳನ್ನು ಬಿಬೆವಾಡಿಯ ಅಭಿಷೇಕ್ ಪಾಂಡ್ರೆ (23) ಮತ್ತು ಗಣರಾಜ್ ಠಾಕರ್ (23) ಎಂದು ಗುರುತಿಸಲಾಗಿದೆ. ಅಪ್ರಾಪ್ತ ವಯಸ್ಕನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

ಬಿಬೆವಾಡಿ ಪೊಲೀಸ್ ಠಾಣೆಯ ಉಸ್ತುವಾರಿ ಶಂಕರ್ ಸಾಳುಂಖೆ ಮಾತನಾಡಿ, “ಬಿಬೆವಾಡಿಯ ವಿಐಟಿ ಕಾಲೇಜಿನ ಬಳಿ ಬೆಳಗಿನ ಜಾವ 2.40ಕ್ಕೆ ಹಾನಿ ಸಂಭವಿಸಿದೆ. ಯಾವುದೇ ಕಾರಣವಿಲ್ಲದೆ ವಾಹನಗಳನ್ನು ಹಾನಿಗೊಳಿಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕೇವಲ ಮೋಜು ಮಾಡಲು ಹೀಗೆ ಮಾಡಿರುವುದಾಗಿ ಹೇಳಿದ್ದಾರೆ. ಅವರನ್ನು ಬಂಧಿಸಲಾಗಿದ್ದು, ಈವರೆಗೆ 25 ವಾಹನ ಮಾಲೀಕರಿಂದ ದೂರುಗಳು ಬಂದಿವೆ” ಎಂದು ತಿಳಿಸಿದ್ದಾರೆ.

“ಮೂವರು ದ್ವಿಚಕ್ರ ವಾಹನದಲ್ಲಿ ಬಂದು, ಚೂಪಾದ ಆಯುಧಗಳಿಂದ ಒಂದೊಂದಾಗಿ ವಾಹನಗಳಿಗೆ ಹೊಡೆದು, ಅಪ್ಪರ್ ಇಂದಿರಾ ನಗರ, ದುರ್ಗಾಮಾತಾ ಗಾರ್ಡನ್, ಸುವರ್ಣ ಮಿತ್ರ ಮಂಡಲ್ ಮತ್ತು ರಾಜೀವ್ ಗಾಂಧಿ ನಗರದಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳ ವಿಂಡ್‌ಸ್ಕ್ರೀನ್‌ಗಳನ್ನು ಒಡೆದಿದ್ದಾರೆ” ಎಂದು ಅವರು ಹೇಳಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ, ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 307 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ವಿಭಾಗದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಏತನ್ಮಧ್ಯೆ, ಮೂವರು ಆರೋಪಿಗಳನ್ನು ಬಂಧಿಸಿದ ನಂತರ, ಪೊಲೀಸರು ಕಪ್ಪು ಬಟ್ಟೆಯಿಂದ ಮುಖ ಮುಚ್ಚಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿಸಿದ್ದು, ಅವರನ್ನು ರಸ್ತೆ ಮೇಲೆ ಮೊಣಕಾಲಿನ ಮೇಲೆ ನಡೆಯುವಂತೆ ಮಾಡಲಾಯಿತು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read