ಪುಣೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ, ಅಪಘಾತಗಳು, ರಸ್ತೆ ರೇಜ್ ಘಟನೆಗಳು ಮತ್ತು ಟ್ರಾಫಿಕ್ ಜಾಮ್ ಸುದ್ದಿಗಳು ಆಗಾಗ್ಗೆ ವೈರಲ್ ಆಗುತ್ತವೆ. ಆದರೆ ಇದೀಗ ಪುಣೆ ಮಹಾನಗರ ಪರಿವಹನ ಮಹಾಮಂಡಳ ನಿಯಮಿತ (PMPML) ಬಸ್ ಚಾಲಕರೊಬ್ಬರು ಸಿಗ್ನಲ್ ನಲ್ಲಿ ರಾಂಗ್ ಸೈಡ್‌ನಿಂದ ಬಂದ ನಿರ್ಲಕ್ಷ್ಯದ ಕಾರು ಚಾಲಕನಿಗೆ ಪಾಠ ಕಲಿಸಿದ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, PMPML ಚಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ವಿಡಿಯೋದಲ್ಲಿ, ಕಾರೊಂದು ರಾಂಗ್ ಸೈಡ್‌ನಿಂದ ಬರುತ್ತಿರುವುದು ಮತ್ತು ಅದು PMPML ಬಸ್‌ನ ಮಾರ್ಗವನ್ನು ತಡೆಯುತ್ತಿರುವ ಕಾರಣ ಟ್ರಾಫಿಕ್ ಜಾಮ್ ಉಂಟಾಗಿರುವುದು ಕಂಡುಬರುತ್ತದೆ.
ʼಪುಣೆ ಮಿರರ್ʼ ವರದಿಯ ಪ್ರಕಾರ, PMPML ಚಾಲಕನನ್ನು ಬಾಲು ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಅವರು PMPML ನ ಭೇಕರೈನಗರ ಡಿಪೋದಲ್ಲಿ ಕೆಲಸ ಮಾಡುತ್ತಾರೆ.
ಕಾರೊಂದು ಸಿಗ್ನಲ್‌ನಲ್ಲಿ ರಾಂಗ್ ಸೈಡ್‌ನಲ್ಲಿ ನುಗ್ಗಿ PMPML ಬಸ್ ತಿರುಗಲು ಅಡ್ಡಿಪಡಿಸಿದಾಗ ಸಂಚಾರ ಅಸ್ತವ್ಯಸ್ತಗೊಂಡಿತು. ಆದಾಗ್ಯೂ, ಅನುಭವಿ ಗಾಯಕ್ವಾಡ್ ಅವರ ಕ್ಷಿಪ್ರ ಚಿಂತನೆ ಮತ್ತು ಧೈರ್ಯದಿಂದ, ಕಾರು ಚಾಲಕ ವಾಹನವನ್ನು ಹಿಂದಕ್ಕೆ ಚಲಿಸಲು ಒತ್ತಾಯಿಸಲ್ಪಟ್ಟು, ಬಸ್ ಹಾದುಹೋಗಲು ಅವಕಾಶ ಮಾಡಿಕೊಟ್ಟಿದ್ದಾನೆ.
पुणे तिथे काय उणे… pic.twitter.com/bewJzefBCN
— पुणेरी स्पिक्स™ Puneri Speaks (@PuneriSpeaks) February 4, 2025