ವಿಮಾನದಲ್ಲಿ ದೇಣಿಗೆ ಬೇಡಿದ ಪಾಕ್‌ ಪ್ರಜೆ….! ವಿಡಿಯೋ ‌ʼವೈರಲ್ʼ

ನೀವು ಬಸ್ ನಲ್ಲೋ ಅಥವಾ ರೈಲಿನಲ್ಲೋ ಪ್ರಯಾಣಿಸುವಾಗ ಭಿಕ್ಷುಕರು ಅಥವಾ ದೇಣಿಗೆ ಕೇಳಿಕೊಂಡು ಬರುವ ದೃಶ್ಯ ಸಾಮಾನ್ಯ. ಇದೀಗ ವ್ಯಕ್ತಿಯೊಬ್ಬ ವಿಮಾನದಲ್ಲಿ ದೇಣಿಗೆ ನೀಡುವಂತೆ ಸಹ-ಪ್ರಯಾಣಿಕರಲ್ಲಿ ಕೇಳಿಕೊಂಡ ವಿಡಿಯೋ ವೈರಲ್ ಆಗಿದೆ.

ಹೌದು, ಪಾಕಿಸ್ತಾನಿ ವ್ಯಕ್ತಿಯೊಬ್ಬ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಹಣ ನೀಡುವಂತೆ ಕೇಳಿದ್ದಾನೆ. ಈ ವೇಳೆ ಆ ವ್ಯಕ್ತಿ ತಾನು ಭಿಕ್ಷೆ ಬೇಡುತ್ತಿಲ್ಲ, ಬದಲಿಗೆ ಲಾಹೋರ್‌ನಲ್ಲಿ ಮದರಸಾ ನಿರ್ಮಿಸಲು ಹಣವನ್ನು ಸಂಗ್ರಹಿಸುತ್ತಿದ್ದೇನೆ ಎಂದು ಹೇಳಿದ್ದಾನೆ.

ನೀಲಿ ಬಣ್ಣದ ಜಾಕೆಟ್‌, ಬಿಳಿ ಕುರ್ತಾ, ಪೈಜಾಮ ಧರಿಸಿದ ವ್ಯಕ್ತಿಯು ಇದ್ದಕ್ಕಿದ್ದಂತೆ ಎದ್ದು ನಿಂತು ಸಹ-ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಲು ಶುರು ಮಾಡಿದ್ದಾನೆ. ಮದರಸಾವನ್ನು ನಿರ್ಮಿಸಲು ಹಣ ಸಂಗ್ರಹಿಸುತ್ತಿದ್ದು, ದಾನ ಮಾಡಲು ಇಚ್ಛಿಸುವವರು ಹಣ ಕೊಡಬಹುದು ಎಂದು ಕೇಳಿಕೊಂಡಿದ್ದಾನೆ.

ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಹಣ ಕೇಳುತ್ತಿರುವ ಇಂತಹ ವ್ಯಕ್ತಿಯನ್ನು ಅನೇಕರು ಟೀಕಿಸಿದ್ದಾರೆ.

ಕೆಲವು ಬಳಕೆದಾರರು ಈ ವ್ಯಕ್ತಿಯನ್ನು ಇಂಟರ್ನೆಟ್ ಸೆನ್ಸೇಷನ್ ಅಖ್ತರ್ ಲಾವಾ ಎಂದು ಗುರುತಿಸಿದ್ದಾರೆ. ಈತ ಉದ್ಯಮಿ ಮತ್ತು ರಾಜಕಾರಣಿಯೂ ಆಗಿದ್ದಾನೆ ಎನ್ನಲಾಗಿದೆ. ಕಳೆದ ವರ್ಷ ತನ್ನ ಚಮತ್ಕಾರಿ ವಿಡಿಯೋಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read