Video | ಏಕಾಏಕಿ ಎದುರಿಗೆ ಬಂದ್ಲು ಭೂತದಂತೆ ವೇಷ ಧರಿಸಿದ್ದ ಯುವತಿ; ಬೆಚ್ಚಿಬಿದ್ದ ಜನ

ಬಾಲಿವುಡ್ ಚಲನಚಿತ್ರ ‘ಭೂಲ್ ಭುಲೈಯಾ’ ದ ‘ಮಂಜುಲಿಕಾ’ ಭೂತ ನೋಡಿ ಬೆಚ್ಚಿಬಿದ್ದವರು ಅದೆಷ್ಟೋ ಮಂದಿ. ಇದೀಗ ರಾಜಸ್ಥಾನದಲ್ಲಿ ಅದೇ ವೇಷ ತೊಟ್ಟ ಹುಡುಗಿಯೊಬ್ಬಳು ಬಿಳಿ ಬಟ್ಟೆಯಲ್ಲಿ ಮುಚ್ಚಿಕೊಂಡು ಜನರನ್ನು ಹೆದರಿಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್​ ಆಗಿದೆ.

ಯುವತಿ ಉದ್ದನೆಯ ಕೂದಲಿನ ವಿಗ್ ಮತ್ತು ದೇಹಕ್ಕೆ ಬಿಳಿ ಹಾಳೆಯನ್ನು ಸುತ್ತಿಕೊಂಡಿರುವುದನ್ನು ವಿಡಿಯೋ ತೋರಿಸುತ್ತದೆ. ರಾಜಸ್ಥಾನದ ಭರತ್‌ಪುರದ ಹವೇಲಿಯೊಂದರಲ್ಲಿ ಯುವತಿ ಸುತ್ತಾಡುತ್ತಾ ಜನರನ್ನು ಹೆದರಿಸಲು ಯತ್ನಿಸಿದ್ದಾಳೆ. ಹುಡುಗಿ ಎಲ್ಲಿಂದಲೋ ಜಿಗಿಯುತ್ತಿರುವುದನ್ನು ಕಂಡು ಜನರು ಜೋರಾಗಿ ಕಿರುಚುವುದನ್ನು ಕ್ಲಿಪ್ ತೋರಿಸುತ್ತದೆ.

ಈ ವಿಡಿಯೋ ಟ್ವಿಟರ್‌ನಲ್ಲಿ 36,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಜನರು ತಮ್ಮದೇ ಆದ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ನಿಜಕ್ಕೂ ಇದು ಆಘಾತಕಾರಿಯಾಗಿದೆ. ಮಕ್ಕಳು ನೋಡಿಕೊಂಡರೆ ಹೆದರಿಕೊಳ್ಳುವುದು ಖಂಡಿತ. ಇಂಥ ದೃಶ್ಯಗಳನ್ನು ಪ್ರಸಾರ ಮಾಡುವುದು ತಪ್ಪು ಎಂದು ಹಲವರು ಕಮೆಂಟ್​ನಲ್ಲಿ ಹೇಳಿದ್ದಾರೆ. ಇನ್ನು ಕೆಲವರು ಇದು ಬಾಲಿವುಡ್​ ಹೆಣ್ಣು ಭೂತ, ಅಬ್ಬಬ್ಬಾ! ನಿಜವಾಗಿಯೂ ಭೂತ ಈ ಬಾಲಿವುಡ್​ನಂತೆ ಇರುತ್ತದೆಯೇ ಎಂದು ತಮಾಷೆ ಮಾಡಿದ್ದಾರೆ.

https://twitter.com/prishafknwalia/status/1612170739968532481?ref_src=twsrc%5Etfw%7Ctwcamp%5Etweetembed%7Ctwterm%5E1612170739968532481%7Ctwgr%5Ee69a4849ec00710d618e1248df7ee8b0acff871d%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-video-of-woman-dressed-as-manjulika-scare-people-in-rajasthan-3678116

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read