ಶಿಕ್ಷಕಿಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ಸ್ವರಗಳನ್ನು ಕಲಿಸುವ ರೀತಿ ಜನರಿಗೆ ಇಷ್ಟವಾಗಿದೆ. ಡಾನ್ಸ್ ಮಾಡ್ತಾ ಶಿಕ್ಷಕಿ ಮಾತ್ರಾಗಳನ್ನು ಕಲಿಸುತ್ತಿದ್ದಾರೆ.
@gulzar_sahab ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಶಿಕ್ಷಕಿಯು ತನ್ನ ವಿದ್ಯಾರ್ಥಿಗಳಿಗೆ ಸ್ವರಗಳನ್ನು ವಿವರಿಸಲು ಭಿನ್ನ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅನೇಕ ಬಾರಿ ಮಕ್ಕಳಿಗೆ ವಿದ್ಯೆ ಕಲಿಸಲು ನಾವು ಮಕ್ಕಳಾಗ್ಬೇಕು ಎನ್ನುವ ಶೀರ್ಷಿಕೆ ಹಾಕಲಾಗಿದೆ.
ಶಿಕ್ಷಕಿ ಸ್ವರಗಳನ್ನು ಕಲಿಸುವ ವೇಳೆ ಕೆಲ ಬಾರಿ ಕೈಯನ್ನು ತಲೆ ಮೇಲೆ ಇಡ್ತಾ, ಕೈಯನ್ನು ಕೆಳಗೆ ತರ್ತಾ, ಡಾನ್ಸ್ ಮಾಡ್ತಾ ಇರೋದನ್ನು ನೋಡಬಹುದು. ಕ್ರಿಯಾತ್ಮಕವಾಗಿ ಬೋಧನೆ ಮಾಡ್ತಿರುವ ಶಿಕ್ಷಕಿಯ ಈ ವಿಡಿಯೋ ಸರ್ಕಾರಿ ಶಾಲೆಯದ್ದು ಎನ್ನಲಾಗಿದೆ.
ವಿಡಿಯೋ 4,000ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. 1,000 ಕ್ಕೂ ಹೆಚ್ಚು ಬಾರಿ ವಿಡಿಯೋ ಶೇರ್ ಮಾಡಲಾಗಿದೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ಹೇಳಿಕೊಡುವ ವಿಧಾನ ಚೆನ್ನಾಗಿದೆ ಆದ್ರೆ ಸ್ವರಗಳ ಉಚ್ಛಾರ ಸರಿಯಿಲ್ಲ ಎಂದು ಕೆಲ ಬಳಕೆದಾರರು ಹೇಳಿದ್ದಾರೆ.
https://twitter.com/Gulzar_sahab/status/1823370001400664352?ref_src=twsrc%5Etfw%7Ctwcamp%5Etweetembed%7Ctwterm%5E1823370001400664352%7Ctwgr%5E072956e3226f19c653dc9a8b89c11a6758b1780c%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fvideoofteachersuniquetutorialgoessoviralthatpoetgulzarhadtoshareitwatch-newsid-n626689900&mx=2