ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಉಂಗುರದ ಗ್ರಾಂಡ್‌ ಎಂಟ್ರಿ; ಅಚ್ಚರಿಗೊಳಗಾದ ನವಜೋಡಿ

ಪ್ರತಿಯೊಬ್ಬರ ಜೀವನದಲ್ಲಿ ಬರುವ ಮಹತ್ತರ ಘಟ್ಟವೇ ಮದುವೆ. ಅದಕ್ಕೂ ಮುಂಚೆ ಮಾಡಿಕೊಳ್ಳುವ ನಿಶ್ಚಿತಾರ್ಥ ಕೂಡಾ ಅಷ್ಟೇ ಮುಖ್ಯವಾಗಿರುತ್ತೆ. ಈ ದಿನವನ್ನ ಸ್ಮರಣೀಯವನ್ನಾಗಿ ಮಾಡ್ಕೊಬೇಕಂತಾನೆ, ಕುಟುಂಬದವರು ಹೊಸ ಹೊಸ ಪ್ರಯೋಗ ಮಾಡ್ತಿರ್ತಾರೆ. ಕೆಲ ವಧು-ವರ ಜೋಡಿ ಟ್ಯಾಟೂ ಹಾಕಿಸ್ಕೊಳ್ತಾರೆ. ಇನ್ನು ಕೆಲ ಜೋಡಿ ಜೀವನ ಸಂಗಾತಿಗಾಗಿ ಡಾನ್ಸ್ ಮಾಡ್ತಾರೆ. ಮತ್ತೆ ಕೆಲವರಂತೂ ಜೆಸಿಬಿ ಇಲ್ಲಾ ಬೈಕ್ ಮೇಲೆ ಬಂದು ಎಲ್ಲರಿಗೂ ಶಾಕ್ ಕೊಡ್ತಾರೆ. ಇಂತಹ ಅನೇಕ ಮದುವೆ ಹಾಗೂ ನಿಶ್ಚಿತಾರ್ಥ ವಿಡಿಯೋಗಳು ಆಗಾಗ ವೈರಲ್ ಆಗ್ತಾ ಇರುತ್ತೆ. ಅಂಥಾ ವಿಡಿಯೋಗಳಲ್ಲಿ ಈ ವಿಡಿಯೋ ಕೂಡಾ ಒಂದು.

ಈ ವಿಡಿಯೋದಲ್ಲಿ ನೀವು ಗಮನಿಸಿದ ಹಾಗೆ, ಬಂಧುಬಳಗದವರು ಎಲ್ಲರೂ ಒಂದು ವಿಶಾಲವಾದ ಹಾಲ್ ಒಳಗೆ ಕೂತಿರುತ್ತಾರೆ. ಅವರ ಎದುರಲ್ಲಿ ಒಂದು ವೇದಿಕೆ ಇದೆ. ಅದೇ ವೇದಿಕೆ ಮೇಲೆ ವಧು-ವರ ಜೋಡಿ ನಿಂತಿರುತ್ತಾರೆ. ಎಲ್ಲರ ಕಣ್ಣು ಆ ಜೋಡಿಯ ಮೇಲೆಯೇ ನೆಟ್ಟಿರುತ್ತೆ. ಆಗಲೇ ಅವರೆಲ್ಲರ ಮಧ್ಯದಿಂದ ಒಂದು ವಿಶಾಲಾಕಾರದ ಉಂಗುರವೊಂದು ಬಂದು, ಜೋಡಿಯ ಮುಂದೆ ತಿರುಗುತ್ತ ನಿಲ್ಲುತ್ತೆ. ಉಂಗುರದ ಆ ಗ್ರಾಂಡ್ ಎಂಟ್ರಿ ನೋಡಿ, ಎಲ್ಲರೂ ದಂಗಾಗಿ ಹೋಗುತ್ತಾರೆ.

ಆ ಉಂಗುರದ ಮೇಲ್ಬಾಗದಲ್ಲಿ, ಮುಚ್ಚಳವೊಂದನ್ನ ಜೋಡಿಸಿರಲಾಗುತ್ತೆ. ಅದೇ ಮುಚ್ಚಳದ ಕೆಳಗೆ ನಿಶ್ಚಿತಾರ್ಥದ ಉಂಗುರವನ್ನ ಇಟ್ಟಿರುತ್ತಾರೆ. ಆ ಜೋಡಿ ಆ ದೊಡ್ಡ ಉಂಗುರದ ಮುಚ್ಚಳವನ್ನ ತೆಗೆದು, ಅಲ್ಲಿ ಇಟ್ಟಿರುವ ಉಂಗುರ ತೆಗೆದು ಪರಸ್ಪರ ಬದಲಾಯಿಸಿಕೊಳ್ಳುವುದರ ಮೂಲಕ, ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ಅಷ್ಟಕ್ಕೂ ಆ ವಿಶಾಲರೂಪದ ಉಂಗುರ ಅವರ ಬಳಿ ಬಂದಿದ್ದಾದರೂ ಹೇಗೆ ಅನ್ನೊದೇ ಅಲ್ಲಿದ್ದವರ ಪ್ರಶ್ನೆಯಾಗಿತ್ತು.

ಅಸಲಿಗೆ ದೊಡ್ಡ ಉಂಗುರವನ್ನು ರಿಮೋಟ್‌ನಿಂದ ಕೆಲಸ ಮಾಡುವ ಚಕ್ರದ ಕಾರ್ಟ್ ಮೇಲೆ ಇಟ್ಟಿರುತ್ತಾರೆ. ಅದರ ರಿಮೋಟ್ ಬಟನ್ ಒತ್ತುತ್ತಿದ್ದ ಹಾಗೆಯೇ ಆ ರಿಂಗ್ ವೇದಿಕೆಯತ್ತ ಸಾಗುತ್ತೆ. ಲಕ್ಷಾಂತರ ಜನರು ಈ ವಿಡಿಯೋವನ್ನ ಈಗಾಗಲೇ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದವರು ಭಿನ್ನ ಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರಂತೂ ಅಲ್ಲಿ ಅತಿಥಿಗಳಿಗೆ, ಯಾವುದೆ ವ್ಯವಸ್ಥೆ ಇಲ್ಲ, ಆದರೂ ಶೋಕಿ ಎಂದು ಅನೇಕರು ಕಾಮೆಂಟ್‌ ಮಾಡಿದ್ದಾರೆ.

https://youtu.be/RfBJfYoLJ00

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read