ಮುಂಬೈನಲ್ಲಿ ಪಾಳುಬಿದ್ದ ಕಟ್ಟಡದೊಳಗೆ ಅಪ್ರಾಪ್ತೆಯನ್ನು ಕರೆದೊಯ್ತಿದ್ದ ಯುವಕನಿಗೆ ಸಾರ್ವಜನಿಕರು ಹಿಡಿದು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಪ್ರಾಪ್ತ ಬಾಲಕಿಯೊಂದಿಗೆ ಇರುವುದಕ್ಕೆ ಸಮಂಜಸವಾದ ವಿವರಣೆಯನ್ನು ನೀಡಲು ವಿಫಲವಾದ ನಂತರ ಜನರು ಯುವಕನನ್ನು ನಿಂದಿಸಿದ್ದು ಆತನನ್ನು ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಘಟನೆಯ ನಿಖರವಾದ ಸಮಯ ಮತ್ತು ದಿನಾಂಕ ಇನ್ನೂ ತಿಳಿದಿಲ್ಲವಾದರೂ ವಿಡಿಯೋವನ್ನ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಪ್ರಾಪ್ತೆ ಬಗ್ಗೆ ಕಾಳಜಿ ತೋರಿದ್ದು, ಯುವಕನನ್ನು ಥಳಿಸಿದ ಸಾರ್ವಜನಿಕರಿಗೆ ಶ್ಲಾಘಿಸಿದ್ದಾರೆ. ಯುವಕನಿಗೆ ಸರಿಯಾದ ಚಿಕಿತ್ಸೆ ಸಿಕ್ಕಿದೆ. ಇವನಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Pedo from mumbra trying to some sh!t with a minor, caught by locals and got good treatment
pic.twitter.com/h3OmWcmQj5— Ghar Ke Kalesh (@gharkekalesh) June 4, 2024