BIG NEWS: ಒಡಿಶಾ ರೈಲು ದುರಂತದ ಹೊತ್ತಲ್ಲೇ ಮತ್ತೊಂದು ವಿಧ್ವಂಸಕ ಕೃತ್ಯಕ್ಕೆ ಸಂಚು…? ಹಳಿ ಮೇಲೆ ಕಲ್ಲು ಜೋಡಿಸಿಟ್ಟ ಬಾಲಕ

ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತ ಮಾಸುವ ಮೊದಲೇ ನಡೆಯಲಿದ್ದ ಮತ್ತೊಂದು ಘೋರ ದುರಂತ ಅದೃಷ್ಟವಶಾತ್ ಕೈತಪ್ಪಿದೆ.

ಟ್ವಿಟರ್ ಬಳಕೆದಾರರು ಹಂಚಿಕೊಂಡಿರುವ ವಿಡಿಯೋದಲ್ಲಿ ಬಾಲಕನೊಬ್ಬ ರೈಲು ಹಳಿಗಳ ಮೇಲೆ ದೂರದವರೆಗೆ ಕಲ್ಲುಗಳನ್ನು ಜೋಡಿಸಿಟ್ಟಿರುವುದು ಕಂಡು ಬಂದಿದೆ. ಆತನನ್ನು ಹಿಡಿದ ವ್ಯಕ್ತಿ ಪ್ರಶ್ನಿಸಿದಾಗ ನಾನು ಆ ರೀತಿ ಮಾಡಿಲ್ಲ ಎಂದು ಹೇಳಿಕೊಂಡಿದ್ದಾನೆ.

ಟ್ರ್ಯಾಕ್ ಮೇಲೆ ಕಲ್ಲು ಹಾಕಿದ್ದು ಏಕೆ, ಎಷ್ಟು ದಿನಗಳಿಂದ ಹೀಗೆ ಮಾಡುತ್ತಿದ್ದೀರಿ ಎಂದು ಬಾಲಕನನ್ನು ಪ್ರಶ್ನಿಸಿದಾಗ, ಇದೇ ಮೊದಲ ಬಾರಿಗೆ ಈ ರೀತಿ ಮಾಡಿದ್ದೇನೆ ಎಂದು ಬಾಲಕ ತಪ್ಪೊಪ್ಪಿಕೊಂಡಿದ್ದಾನೆ, ಯಾರೂ ಹಾಗೆ ಮಾಡುವಂತೆ ನನಗೆ ಹೇಳಿಲ್ಲ ಎನ್ನುತ್ತಾನೆ.

ಒಬ್ಬ ವ್ಯಕ್ತಿ ಈತನನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ಹೇಳಿದಾಗ, ಬಾಲಕ ಆತನ ಪಾದಗಳನ್ನು ಮುಟ್ಟಿ ಪೊಲೀಸರಿಗೆ ಒಪ್ಪಿಸಬೇಡಿ ಎಂದು ಮನವಿ ಮಾಡುತ್ತಾನೆ.

ಟ್ವಿಟ್ಟರ್ ಬಳಕೆದಾರ ಅರುಣ್ ಪುದೂರ್, ಈ ವೀಡಿಯೊವನ್ನು ಹಂಚಿಕೊಂಡಿದ್ದು, ಈ ವಿಷಯವನ್ನು ಪರಿಶೀಲಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

https://twitter.com/arunpudur/status/1665650327851515904

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read