ಮಕ್ಕಳಿಗಾಗಿ ಅಮ್ಮಂದಿರು ಪಡೋ ಕಷ್ಟ ಅಷ್ಟಿಷ್ಟಲ್ಲ. ತನಗೆ ಎಷ್ಟೇ ಸಮಸ್ಯೆ ಆದ್ರೂ, ಮಕ್ಕಳು ಮಾತ್ರ ಸದಾ ತಿಂದು-ಉಂಡು ನೆಮ್ಮದಿಯಾಗಿರಬೇಕು ಎಂದು ಬಯಸುವ ನಿಷ್ಕಲ್ಮಶಯ ಹೃದಯವದು.
ಇತ್ತಿಚೆಗೆ ಸೊಶಿಯಲ್ ಮಿಡಿಯಾದಲ್ಲಿ ತಾಯಿಯೊಬ್ಬಳು ಮಗುವಿಗಾಗಿ ಕಷ್ಟ ಪಡುವ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಕೆ ತನ್ನ ಮಗುವನ್ನ ಮಡಿಲಲ್ಲಿ ಇಟ್ಟುಕೊಂಡು ಆಟೋ ಓಡಿಸ್ತಿರ್ತಾಳೆ.
ಹೊಟ್ಟೆ ಪಾಡಿಗಾಗಿ ಆಕೆ ಆಟೋ ಓಡಿಸುವುದು ಅನಿವಾರ್ಯ. ಹಾಗಂತ ಆಕೆ ತನ್ನ ಮಗುವನ್ನ ಬಿಟ್ಟಿರಲಿಲ್ಲ. ತನ್ನ ಮಗುವನ್ನ ಮಡಿಲಲ್ಲೇ ಮಲಗಿಸಿ, ಎದೆ ಹಾಲು ಕುಡಿಸುತ್ತಾ ಆಟೋ ಓಡಿಸ್ತಿದ್ದಾಳೆ.
ಅಷ್ಟೆ ಅಲ್ಲ ಆಟೋದಲ್ಲಿ ಕುಳಿತ ಗ್ರಾಹಕರೊಂದಿಗೆ ಚೌಕಾಸಿಯನ್ನ ಕೂಡ ಮಾಡ್ತಿದ್ದಾಳೆ. ಇದೇ ವಿಡಿಯೋ ಈಗ ವೈರಲ್ ಆಗಿದೆ.
ವೈರಲ್ ಆಗಿರೋ ಈ ವಿಡಿಯೋ ನೋಡಿ ನೆಟ್ಟಿಗರು, ಈ ತಾಯಿ, ಮಗುವಿಗಾಗಿ ಕಷ್ಟ ಪಡುವುದನ್ನ ನೋಡಿ ದಂಗಾಗಿದ್ದಾರೆ.
ಇದಕ್ಕೆ ಸಾವಿರಾರು ಕಾಮೆಂಟ್ಗಳು ಬಂದಿವೆ. ಕೆಲವರು ಈ ವಿಡಿಯೋ ನೋಡಿ ಇಂತಹ ಅಮ್ಮಂದಿರ ಪಾದಕ್ಕೆ ನಮಸ್ಕರಿಸಬೇಕು ಎಂದಿದ್ದಾರೆ. ಇನ್ನೂ ಕೆಲವರು ಈಕೆಗೆ ತಮ್ಮಿಂದಾದಷ್ಟು ಆರ್ಥಿಕ ಸಹಾಯ ಮಾಡುವುದಾಗಿಯೂ ಹೇಳಿದ್ದಾರೆ.
Viral Video: Woman Drives E-Rickshaw With Child In Hand; Leaves Netizens Emotional#viral #TrendingNow https://t.co/bKApBfLNME
— India.com (@indiacom) July 7, 2023