ಅಮೆರಿಕದ ಅಲಾಸ್ಕಾದ ಸಿನೆಮಾ ಒಂದಕ್ಕೆ ಅನಿರೀಕ್ಷಿತ ವೀಕ್ಷಕರೊಬ್ಬರು ಆಗಮಿಸಿದ್ದು, ಭಾರೀ ಸುದ್ದಿಯಾಗಿದ್ದಾರೆ.
ಸಿನೆಮಾ ಹಾಲ್‌ಗೆ ಆಗಮಿಸಿದ ಕಡವೆಯೊಂದು ಅಲ್ಲಿದ್ದ ಪಾಪ್‌ಕಾರ್ನ್ ಎಂಜಾಯ್ ಮಾಡುತ್ತಿರುವುದನ್ನು ಸಿಸಿ ಟಿವಿ ಕ್ಯಾಮೆರಾಗಳು ಸೆರೆ ಹಿಡಿದಿವೆ. ಕೆನಾಯ್ ಸಿನೆಮಾಸ್ ಎಂಬ ಚಿತ್ರಮಂದಿರಕ್ಕೆ ಆಗಮಿಸಿದ ಈ ಕಡವೆ ಅಲ್ಲಿ ಸುಮಾರು ಐದು ನಿಮಿಷ ಕಳೆದಿದೆ.
ಅಲ್ಲಿಯೇ ಇದ್ದ ರೆಸ್ಟೋರೆಂಟ್‌ಗಳ ಒಳಗೂ ಹೋದ ಕಡವೆ, ತನ್ನ ಆಹಾರ ಶೋಧ ಮುಂದುವರೆಸಿ, ಸ್ವಲ್ಪ ಹೊತ್ತಿನ ಬಳಿಕ ಕಟ್ಟಡವನ್ನು ಬಿಟ್ಟು ಹೊರಗೆ ಸಾಗಿದೆ.
https://twitter.com/JRodzMIA/status/1650921609400598531?ref_src=twsrc%5Etfw%7Ctwcamp%5Etweetembed%7Ctwterm%5E1650921609400598531%7Ctwgr%5E9045fa311e072828e7d4440dbaaa450a20ac0883%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fvideo-moose-walks-into-a-movie-theatre-in-us-snacks-on-popcorn-3980826