ಶನಿವಾರದಂದು ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಟ್ಟು ಆರು ಮಂದಿ ಉಗ್ರರನ್ನು ಸದೆಬಡಿಯಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ಈರ್ವ ಯೋಧರು ಹುತಾತ್ಮರಾಗಿದ್ದಾರೆ.
ವೀರ ಮರಣವನ್ನಪ್ಪಿದ ಭಾರತೀಯ ಯೋಧರಾದ ಲ್ಯಾನ್ಸ್ ನಾಯಕ್ ಪ್ರದೀಪ್ ಕುಮಾರ್ ಹಾಗೂ ಸಿಪಾಯಿ ಪ್ರವೀಣ್ ಜಂಜಲ್ ಪ್ರಭಾಕರ್ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದ ಹಿರಿಯ ಅಧಿಕಾರಿಗಳು ಬಳಿಕ ಅವರವರ ಊರುಗಳಿಗೆ ಮೃತ ದೇಹಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಇದರ ಮಧ್ಯೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರರು, ಮನೆಯೊಂದರ ವಾರ್ಡ್ರೋಬ್ ನಲ್ಲಿ ತಮ್ಮ ಅಡಗುದಾಣ ಮಾಡಿಕೊಂಡಿರುವುದನ್ನು ಭಾರತೀಯ ಸೇನೆಯ ಯೋಧರು ಪತ್ತೆ ಹಚ್ಚಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಾರ್ಡ್ರೋಬ್ ಮೂಲಕ ಉಗ್ರರ ಅಡಗುದಾಣ ಪ್ರವೇಶಿಸಿದಾಗ ಅಲ್ಲಿ ಎಲ್ಲ ರೀತಿಯ ಸೌಲಭ್ಯವನ್ನು ಮಾಡಿಕೊಂಡಿರುವುದು ಕಂಡು ಬಂದಿದೆ. ಅಚ್ಚರಿಯ ಸಂಗತಿ ಎಂದರೆ ನಾಗರಿಕರು ವಾಸಿಸುವ ಪ್ರದೇಶದಲ್ಲೇ ಈ ಅಡಗುದಾಣ ಇತ್ತು.
https://twitter.com/INCVivekSingh/status/1810007463111880894?ref_src=twsrc%5Etfw%7Ctwcamp%5Etweetembed%7Ctwterm%5E1810007463111880894%7Ctwgr%5E85824a6a6207d0f6bcb50e339da2b837f28d48b3%7Ctwcon%5Es1_&ref_url=https%3A%2F%2Fm.dailyhunt.in%2Fnews%
https://twitter.com/ChinarcorpsIA/status/1809819864460325098?ref_src=twsrc%5Etfw%7Ctwcamp%5Etweetembed%7Ctwterm%5E1809819864460325098%7Ctwgr%5E8