ಸೀಟ್ ಗಾಗಿ ವಿಮಾನದಲ್ಲಿ ಕೈ ಕೈ ಮಿಲಾಯಿಸಿದ ಪ್ರಯಾಣಿಕರು; ಗಲಾಟೆ ವಿಡಿಯೋ ವೈರಲ್

ತೈವಾನ್‌ನಿಂದ ಕ್ಯಾಲಿಫೋರ್ನಿಯಾಗೆ ತೆರಳ್ತಿದ್ದ ಇವಾ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಸೀಟಿಗಾಗಿ ಜಗಳವಾಡಿದ್ದಾರೆ. ಈ ಆಘಾತಕಾರಿ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ ಘಟನೆ ಮಂಗಳವಾರ ನಡೆದಿದೆ. 11.5 ಗಂಟೆಗಳ ಸುದೀರ್ಘ ಪ್ರಯಾಣದಲ್ಲಿ ವಿಮಾನ ಹಾರಾಟ ಶುರುವಾದ ಕೆಲವೇ ಗಂಟೆಗಳಲ್ಲಿ ಗಲಾಟೆ ಪ್ರಾರಂಭವಾಯಿತು. ಪಕ್ಕದಲ್ಲಿದ್ದವರು ಕೆಮ್ಮುತ್ತಿದ್ದರೆಂದು ಓರ್ವ ಪ್ರಯಾಣಿಕ ಬೇರೊಂದು ಸೀಟ್ ನಲ್ಲಿ ಕೂತಿದ್ದಾರೆ. ಆ ಸೀಟ್ ನಲ್ಲಿ ಈಗಾಗಲೇ ಕೂತಿದ್ದ ಪ್ರಯಾಣಿಕ ಬಂದು ನೋಡಿದಾಗ ಸಿಟ್ಟಿಗೆದ್ದ ಆತ ತನ್ನ ಸೀಟ್ ನಲ್ಲಿ ಕೂತಿದ್ದ ವ್ಯಕ್ತಿಗೆ ಹೊಡೆಯಲು ಪ್ರಯತ್ನಿಸಿದ.

ಈ ವೇಳೆ ಇಬ್ಬರಿಗೂ ಜಗಳವಾಗಿದೆ. ಅವರನ್ನು ಶಾಂತಗೊಳಿಸಲು ವಿಮಾನ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಇಬ್ಬರನ್ನೂ ಬೇರ್ಪಡಿಸುವ ಸಂದರ್ಭದಲ್ಲಿ ಓರ್ವ ವಿಮಾನ ಸಿಬ್ಬಂದಿ ತಲೆಗೂ ಪೆಟ್ಟಾಗಿದೆ. ಆದರೂ ಇಬ್ಬರೂ ಜಗಳ ಮುಂದುವರೆಸುತ್ತಾರೆ. ಇದನ್ನು ಕಂಡು ಪ್ರಯಾಣಿಕರು ಕಿರುಚುತ್ತಾರೆ.

ವಿಮಾನ ಸಿಬ್ಬಂದಿ ಅಂತಿಮವಾಗಿ ಗಲಾಟೆಯನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದರು. ಆದರೆ ಆ ಇಬ್ಬರು ಪ್ರಯಾಣಿಕರು ಮಾತ್ರ ಗಲಾಟೆ ಮುಂದುವರೆಸಿದ್ದರು. ನಂತರ ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

https://twitter.com/AFlyGuyTravels/status/1788181133722604003?ref_src=twsrc%5Etfw%7Ctwcamp%5Etweetembed%7Ctwterm%5E17881811337226

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read