ಮೊದಲ ಬಾರಿಗೆ ಫೋಟೋ ತೆಗೆಸಿಕೊಂಡ ವೃದ್ಧ ದಂಪತಿ: ಮನ ಕಲಕುವ ವಿಡಿಯೋ ವೈರಲ್ | Watch

ಸೂರ್ಯ ಮುಳುಗುವ ಹೊತ್ತು, ರಸ್ತೆಯ ಬದಿಯಲ್ಲಿ ನಿಂತಿದ್ದ ಛಾಯಾಗ್ರಾಹಕನಿಗೆ ಸೈಕಲ್ ನಲ್ಲಿ ನಿಧಾನವಾಗಿ ಸಾಗುತ್ತಿದ್ದ ವೃದ್ಧ ದಂಪತಿಗಳು ಕಾಣಿಸಿದ್ದಾರೆ. ಹಳೆಯ, ಸರಳವಾದ ಬಟ್ಟೆಗಳನ್ನು ಧರಿಸಿದ್ದ ವೃದ್ಧ ಸೈಕಲ್ ತುಳಿಯುತ್ತಿದ್ದರೆ, ಆತನ ಪತ್ನಿ ಕಾರ್ಟ್‌ನಲ್ಲಿ ಹಾಕಿದ್ದ ದೊಡ್ಡ ಚೀಲವನ್ನು ಹಿಡಿದುಕೊಂಡಿದ್ದರು.

“ಫೋಟೋ ತೆಗೆದುಕೊಳ್ಳುತ್ತೀರಾ ?” ಎಂದು ಛಾಯಾಗ್ರಾಹಕ ಕೇಳಿದಾಗ, ಅವರ ಮುಖದಲ್ಲಿ ಮಕ್ಕಳಂತಹ ಸಂತೋಷ ಮೂಡಿದ್ದು, “ಖಂಡಿತ, ಖಂಡಿತ” ಎಂದು ಇಬ್ಬರೂ ಒಟ್ಟಿಗೆ ಉತ್ತರಿಸಿದ್ದಾರೆ.

ಛಾಯಾಗ್ರಾಹಕ ಕಾರ್ಟ್ ಅನ್ನು ಬದಿಯಲ್ಲಿ ನಿಲ್ಲಿಸಿ, ಹಸಿರು ಹುಲ್ಲಿನ ಮೈದಾನದ ಬಳಿಯ ಮರದ ಬಳಿ ನಿಲ್ಲಲು ಸೂಚಿಸಿದಾಗ ವೃದ್ಧ ಬಿಳಿ ಕೂದಲನ್ನು ಸರಿಪಡಿಸುತ್ತಿದ್ದಂತೆ, ಮಹಿಳೆ ತನ್ನ ಬಟ್ಟೆಗಳನ್ನು ನೋಡಿ ಹಿಂಜರಿದಿದ್ದಾರೆ.

“ನಮ್ಮ ಬಟ್ಟೆಗಳು ಕೊಳಕಾಗಿವೆ” ಎಂದು ಅವರು ಹೇಳಿದ್ದು, ಛಾಯಾಗ್ರಾಹಕ ವೃದ್ಧನ ತೋಳನ್ನು ತೆಗೆದುಕೊಂಡು ಆತನ ಹೆಂಡತಿಯ ಸುತ್ತಲೂ ಇರಿಸಿ, ಒಟ್ಟಿಗೆ ಪೋಸ್ ನೀಡಲು ತಿಳಿಸಿದ್ದಾರೆ.

ಮಹಿಳೆ ನಾಚಿಕೆಯಿಂದ ನಕ್ಕಿದ್ದು, ಕ್ಯಾಮೆರಾ ನೋಡುತ್ತಿದ್ದಂತೆ ಅವರ ಕಣ್ಣುಗಳು ಅರಳಿವೆ. ಅವರು ಆರಾಮವಾಗಿ ನಿಂತ ನಂತರ, ಛಾಯಾಗ್ರಾಹಕ ವಿವಿಧ ಭಂಗಿಗಳಲ್ಲಿ ಫೋಟೋ ತೆಗೆದಿದ್ದಾರೆ.

ಬಳಿಕ ಮಾತನಾಡುವ ವೇಳೆ, ದಂಪತಿ ಪ್ರತಿದಿನ ಮೂರು ಗಂಟೆಗಳ ಕಾಲ ಪ್ರಯಾಣಿಸುತ್ತಾರೆ ಮತ್ತು ಸಂಜೆ ಅದೇ ದಾರಿಯಲ್ಲಿ ಹಿಂತಿರುಗುತ್ತಾರೆ ಎಂದು ಛಾಯಾಗ್ರಾಹಕನಿಗೆ ತಿಳಿಯಿತು. ಫೋಟೋಗಳು ಮುದ್ರಣವಾಗಲು ಕಾಯುತ್ತಿದ್ದಾಗ, ಛಾಯಾಗ್ರಾಹಕ ಅವರಿಗೆ ತಲಾ ಒಂದು ಕಪ್ ಐಸ್ ಕ್ರೀಮ್ ನೀಡಿದ್ದಾರೆ.

ಮುದ್ರಣಗಳು ಸಿದ್ಧವಾದಾಗ, ಅವನು ಅವುಗಳನ್ನು ನೀಡಿದ್ದು, ಮೊದಲ ಬಾರಿಗೆ ಮುದ್ರಣದಲ್ಲಿ ತಮ್ಮ ಚಿತ್ರಗಳನ್ನು ನೋಡಿದಾಗ, ಇಬ್ಬರೂ ಸಂತೋಷದಿಂದ ನಕ್ಕಿದ್ದಾರೆ.

ಕೊನೆಯ ಬಾರಿಗೆ ಫೋಟೋ ತೆಗೆಸಿಕೊಂಡಿದ್ದು ಯಾವಾಗ ಎಂದು ಕೇಳಿದಾಗ, ಮಹಿಳೆ “ಯಾವತ್ತೂ ತೆಗೆಸಿಕೊಂಡಿಲ್ಲ” ಎಂದು ಉತ್ತರಿಸಿದ್ದಾರೆ.

ಚಿತ್ರಗಳನ್ನು ಮೆಚ್ಚಿದ ಮಹಿಳೆ ತನ್ನ ಗಂಡನ ಕಡೆಗೆ ತಿರುಗಿ, “ನಾವು ಇಲ್ಲದ ನಂತರ ಒಂದು ದಿನ, ನಮ್ಮ ಮಕ್ಕಳು ಈ ಚಿತ್ರವನ್ನು ನೋಡುತ್ತಾರೆ ಮತ್ತು ಇವರು ನಮ್ಮ ತಂದೆ – ತಾಯಿ ಎಂದು ಹೇಳುತ್ತಾರೆ” ಎಂದು ಹೇಳಿದ್ದಾರೆ.

ಕೃತಜ್ಞತೆಯಿಂದ, ದಂಪತಿಗಳು ಕೈಗಳನ್ನು ಮುಗಿದು ನಂತರ, ಅವರು ಫೋಟೋಗಳನ್ನು ಕಾರ್ಟ್‌ನಲ್ಲಿರುವ ಚೀಲದಲ್ಲಿ ಎಚ್ಚರಿಕೆಯಿಂದ ಇಟ್ಟುಕೊಂಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read