ಲಕ್ನೋ ವಿಮಾನ ನಿಲ್ದಾಣದಿಂದ ನಾಟಕೀಯ ರೀತಿಯಲ್ಲಿ 30 ಚಿನ್ನ ಕಳ್ಳಸಾಗಣೆದಾರರು ಪರಾರಿ: ತನಿಖೆಗೆ ಆದೇಶ

ಲಕ್ನೋ: ವಿಚಿತ್ರ ಘಟನೆಯೊಂದರಲ್ಲಿ ಸುಮಾರು 30 ಚಿನ್ನದ ಕಳ್ಳಸಾಗಣೆದಾರರು ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ “ಓಪನ್ ಎಕ್ಸಿಟ್” ಪಡೆದಿದ್ದಾರೆ. ಮಾತ್ರವಲ್ಲ, ಚಿನ್ನದೊಂದಿಗೆ ವಿಮಾನ ನಿಲ್ದಾಣದಿಂದ ಪರಾರಿಯಾಗಿದ್ದಾರೆ.

ಭದ್ರತಾ ಸಿಬ್ಬಂದಿ ಪ್ರೇಕ್ಷಕನಾಗಿ ನಿಂತಿದ್ದರು. ಚಿನ್ನ ಕಳ್ಳಸಾಗಣೆದಾರರು ಓಡಿಹೋಗಿರುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಕ್ಲಿಪ್ ಲಕ್ನೋ ವಿಮಾನ ನಿಲ್ದಾಣದ ನಿರ್ಗಮನ ಸ್ಥಳದ ಬಳಿ ತಲುಪಿದ 30 ಜನರ ಗುಂಪು ನಾಟಕೀಯ ಶೈಲಿಯಲ್ಲಿ ಹೇಗೆ ತಪ್ಪಿಸಿಕೊಂಡರು ಎಂಬುದನ್ನು ತೋರಿಸಿದೆ. ಆಘಾತಕಾರಿ ಸಂಗತಿಯೆಂದರೆ, ಕರ್ತವ್ಯದಲ್ಲಿದ್ದ ಗಾರ್ಡ್‌ಗಳು ಸಹ ಸ್ಮಗ್ಲರ್ ಗಳು ತಪ್ಪಿಸಿಕೊಳ್ಳುವುದನ್ನು ತಡೆಯಲಿಲ್ಲ.

ಕೆಲವು ದಿನಗಳ ಹಿಂದೆ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 36 ಚಿನ್ನದ ಕಳ್ಳಸಾಗಣೆದಾರರನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದರು. ಆದಾಗ್ಯೂ, ನಾಟಕೀಯ ದೃಶ್ಯದಲ್ಲಿ, 36 ಚಿನ್ನದ ಕಳ್ಳಸಾಗಣೆದಾರರಲ್ಲಿ 30 ಜನರು ವಿಮಾನ ನಿಲ್ದಾಣದಿಂದ ಪರಾರಿಯಾಗಿದ್ದಾರೆ ಎಂದು ವೀಡಿಯೊ ತೋರಿಸುತ್ತದೆ.

ಘಟನೆಯ ನಂತರ ಲಕ್ನೋ ವಿಮಾನ ನಿಲ್ದಾಣದಲ್ಲಿದ್ದ 8 ಅಧಿಕಾರಿಗಳನ್ನು ವಿಮಾನ ನಿಲ್ದಾಣವು ವರ್ಗಾವಣೆ ಮಾಡಿದೆ. ವಿಮಾನ ನಿಲ್ದಾಣದ ಅಧಿಕಾರಿ ಎ.ಕೆ. ಸಿಂಗ್ ಅವರು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಎ.ಕೆ. ಸಿಂಗ್ ಅವರನ್ನೂ ವರ್ಗಾವಣೆ ಮಾಡಲಾಗಿದ್ದು, ಪ್ರಕರಣದಲ್ಲಿ ತನಿಖೆಗೆ ಆದೇಶಿಸಲಾಗಿದೆ.

ಸರೋಜಿನಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರು ವಿಮಾನ ನಿಲ್ದಾಣದಿಂದ ತಪ್ಪಿಸಿಕೊಂಡು ನಾಪತ್ತೆಯಾಗಿರುವ ಕಳ್ಳಸಾಗಣೆದಾರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ನಾಟಕೀಯ ರೀತಿಯಲ್ಲಿ ಪರಾರಿಯಾಗಿರುವ 30 ಕಳ್ಳಸಾಗಾಣಿಕೆದಾರರನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.

https://twitter.com/priyarajputlive/status/1777583114111406310

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read