Video : ಸ್ವಲ್ಪ ಎಚ್ಚರ ತಪ್ಪಿದ್ದರೂ ಅನಾಹುತವೇ ನಡೆದು ಹೋಗುತ್ತಿತ್ತು….!

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು, ಬೆಚ್ಚಿಬೀಳಿಸುವಂತಿದೆ. ನಾಟಕ ಒಂದರ ಸನ್ನಿವೇಶದ ದೃಶ್ಯ ಇದಾಗಿದ್ದು, ಇಬ್ಬರು ಪಾತ್ರಧಾರಿಗಳು ಎಷ್ಟರಮಟ್ಟಿಗೆ ತಮ್ಮ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರೆಂಬುದು ಇದು ಸ್ಪಷ್ಟಪಡಿಸುತ್ತದೆ.

ದೇವತೆ ಮತ್ತು ಅಸುರನ ನಡುವೆ ಕಾಳಗ ನಡೆಯುವ ಸನ್ನಿವೇಶ ನಡೆಯುತ್ತಿರುವ ವೇಳೆ ದೇವತೆ ಪಾತ್ರಧಾರಿ ಮತ್ತು ಅಸುರ ಪಾತ್ರಧಾರಿ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ. ಪ್ರೇಕ್ಷಕರು ಕೂಡ ಈ ಸನ್ನಿವೇಶವನ್ನು ಕುತೂಹಲದಿಂದ ವೀಕ್ಷಿಸುತ್ತಿರುತ್ತಾರೆ.

ದೇವತೆ ಪಾತ್ರಧಾರಿ ಎಷ್ಟರಮಟ್ಟಿಗೆ ತಮ್ಮ ಪಾತ್ರದಲ್ಲಿ ತಲ್ಲೀನರಾಗಿರುತ್ತಾರೆ ಎಂದರೆ ಅಸುರನನ್ನು ಕೆಳಕ್ಕೆ ಬೀಳಿಸಿ ಇನ್ನೇನು ತ್ರಿಶೂಲದಿಂದ ಆತನ ಹೊಟ್ಟೆ ಇರಿಯಲು ಮುಂದಾದಾಗ ತಕ್ಷಣವೇ ಪರಿಸ್ಥಿತಿಯನ್ನು ಅರಿತ ಅಲ್ಲಿದ್ದವರು ದೇವತೆ ಪಾತ್ರಧಾರಿಯನ್ನು ಹಿಡಿದುಕೊಂಡು ತ್ರಿಶೂಲ ವಾಪಸ್ ಪಡೆದಿದ್ದಾರೆ. ಇಷ್ಟಾದರೂ ಸಹ ದೇವತೆ ಪಾತ್ರಧಾರಿಯ ರೋಷಾವೇಶ ಕಡಿಮೆಯಾಗಿರಲಿಲ್ಲ. ಕೂಡಲೇ ರಂಗಸ್ಥಳದ ಲೈಟ್ ಆಫ್ ಮಾಡಿ ದೇವತೆ ಪಾತ್ರಧಾರಿಯನ್ನು ಗ್ರೀನ್ ರೂಮಿಗೆ ಕರೆದೊಯ್ದು ಸಮಾಧಾನಪಡಿಸುವ ಕೆಲಸ ಮಾಡುತ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read